ಹನೂರು: ಆಕಸ್ಮಿಕ ಬೆಂಕಿಗೆ ಜೋಳದ ಬಣವೆ ಭಸ್ಮ
Update: 2021-02-07 10:00 IST
ಹನೂರು, ಫೆ.6: ಆಕಸ್ಮಿಕ ಬೆಂಕಿ ಅನಾಹುತಕ್ಕೆ ರೈತ ಬೆಳದಿರುವ ಜೋಳದ ಬಣವೆ ಆಹುತಿಯಾಗಿರುವ ಘಟನೆ ಹನೂರು ತಾಲೂಕಿನ ತೊಮಿಯಾರ್ ಪಾಳ್ಯ ಸಮೀಪದ ಸಂಗೀತದೊಡ್ಡಿಯಲ್ಲಿ ಸಂಭವಿಸಿದೆ.
ಶನಿವಾರ ರಾತ್ರಿ ಸಂಗೀತದೊಡ್ಡಿಯಲ್ಲಿ ಶೇಶುರಾಜ್ ಎಂಬವರಿಗೆ ಸೇರಿದ ಜೋಳದ ಬಣವೆ ರಾಶಿಗೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಬಣವೆ ಸಂಪೂರ್ಣ ಭಸ್ಮವಾಗಿದೆ. ಇದರಿಂದ ರೈತ ಶೇಶುರಾಜ್ ರವರಿಗೆ ಭಾರಿ ನಷ್ಟವಾಗಿದೆ.
ಜೋಳದ ಬಣವೆಗೆ ಬೆಂಕಿ ಬಿದ್ದ ಮಾಹಿತಿ ಪಡೆದ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ, ಬೆಂಕಿಯನ್ನು ನಂದಿಸಿದರು.
ಜೋಳದ ಬಣವೆಗೆ ಬೆಂಕಿ ಬಿದ್ದ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.