×
Ad

ಗ್ಯಾಸ್ ಸಿಲಿಂಡರ್ ಅಕ್ರಮ ರೀಫಿಲ್ಲಿಂಗ್: ಆರೋಪಿ ಬಂಧನ

Update: 2021-02-07 22:00 IST

ಶಿವಮೊಗ್ಗ: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶಿವಮೊಗ್ಗ ನಗರದ ನಿವಾಸಿ ಸಮೀರ್ ಅಹಮದ್ (34) ಎಂಬವರನ್ನು ಬಂಧಿಸಲಾಗಿದೆ. 

ಪೊಲೀಸ್ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನೇತೃತ್ವದ ತಂಡ ದಾಳಿ ಮಾಡಿದ್ದು, ಆರೋಪಿಯಿಂದ ಗೃಹ ಬಳಕೆಯ 14 ಗ್ಯಾಸ್ ತುಂಬಿದ ಸಿಲಿಂಡರ್, 3 ಖಾಲಿ ಸಿಲಿಂಡರ್, ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ಮೋಟಾರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸವಾಯಿಪಾಳ್ಯದಲ್ಲಿ ಆರೋಪಿಯು ಗೃಹ ಬಳಕೆಯ ಗ್ಯಾಸ್ ಸಿಲಿಂಡರ್‌ಗಳನ್ನು ಬೇರೆ ಸಿಲಿಂಡರ್‌ಗಳಿಗೆ ಮತ್ತು ವಾಹನಗಳಿಗೆ ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಸಂತಕುಮಾರ್, ಪಿಎಸ್‌ಐ ಶಂಕರ್ ಮೂರ್ತಿ, ಮಂಜುನಾಥ್, ಸಿಬ್ಬಂದಿ ಲಚ್ಚಾನಾಯ್ಕ್, ಸುಬ್ರಾಯ, ಸುದರ್ಶನ್, ರಮೇಶ್ ಅವರನ್ನು ಒಳಗೊಂಡ ತಂಡ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಶಿವಾನಂದ್ ಅಜ್ಜಂಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News