×
Ad

ಬೆಲೆ ಏರಿಕೆ ಖಂಡಿಸಿ ಹಗ್ಗ ಕಟ್ಟಿ ಜೀಪು ಎಳೆದರು, ಆಟೋರಿಕ್ಷಾ ತಳ್ಳಿದರು !

Update: 2021-02-07 22:25 IST

ಮಡಿಕೇರಿ, ಫೆ.7: ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಪಕ್ಷ ನೆಲ್ಯಹುದಿಕೇರಿಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿತು.

ಪ್ರತಿಭಟನಾಕಾರರು ಮುಖ್ಯ ರಸ್ತೆಯಲ್ಲಿ ಜೀಪನ್ನು ಹಗ್ಗ ಕಟ್ಟಿ ಎಳೆದರು, ಆಟೋ ರಿಕ್ಷಾ, ಬೈಕ್ ನ್ನು ತಳ್ಳಿದರು, ಅಡುಗೆ ಅನಿಲದ ಸಿಲಿಂಡರ್ ನ್ನು ತಲೆ ಮೇಲೆ ಹೊತ್ತು ಸಾಗಿದರು.  

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಘೋಷಣೆ ಕೂಗಿದ ಸಿಪಿಐಎಂ ಪ್ರಮುಖರು ಹಾಗೂ ಸದಸ್ಯರು ಬೆಲೆ ಏರಿಕೆಯನ್ನು ನಿಯಂತ್ರಿಸುವಂತೆ ಒತ್ತಾಯಿಸಿದರು. ಸರ್ಕಾರ ಜನಪರವಾದ ನಿರ್ಧಾರವನ್ನು ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಸಿಪಿಐಎಂ ಮುಖಂಡ ಪಿ.ಆರ್.ಭರತ್ ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News