65 ಲಕ್ಷ ರೂ. ದೋಚಿ ಮನೆ ಸದಸ್ಯರ ಜೊತೆ ಪರಾರಿಯಾದ ಎಟಿಎಂ ವಾಹನದ ಚಾಲಕ

Update: 2021-02-09 17:00 GMT

ಬೆಂಗಳೂರು, ಫೆ.9: ರಾಜಧಾನಿ ಬೆಂಗಳೂರು ನಗರದಲ್ಲಿ ಎಟಿಎಂ ಹಣ ತುಂಬಲು ವಾಹನದಲ್ಲಿ ತಂದಿದ್ದ 65 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿರುವ ಚಾಲಕನಿಗಾಗಿ ಇಲ್ಲಿನ ಸುಬ್ರಮಣ್ಯನಗರ ಠಾಣಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಯೊಂದಿಗೆ ಮನೆ ಸದಸ್ಯರೆಲ್ಲರೂ ಪರಾರಿಯಾಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ಫೆ.2ರ ರಾತ್ರಿ ಸುಬ್ರಮಣ್ಯನಗರದ ಆಕ್ಸಿಸ್ ಬ್ಯಾಂಕ್‍ನ ಎಟಿಎಂಗೆ ಗನ್‍ಮ್ಯಾನ್ ಮತ್ತು ಮ್ಯಾನೇಜರ್ ದುಡ್ಡು ಹಾಕಲು ಒಳ ಹೋಗಿದ್ದಾಗ ಹೊರಗಿದ್ದ ವಾಹನದ ಚಾಲಕ ಯೋಗೇಶ್ ಎಂಬಾತ 65 ಲಕ್ಷ ರೂ.ಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಆರೋಪಿಗಾಗಿ ಶೋಧ ಕಾರ್ಯ ನಡೆಸಿರುವ ಪೊಲೀಸರಿಗೆ ಕೆಲವೊಂದು ಮಾಹಿತಿಗಳು ಲಭ್ಯವಾಗಿದ್ದು, ಎಟಿಎಂಗೆ ಹಾಕಬೇಕಿದ್ದ ಹಣದ ಜತೆ ತನ್ನ ಅತ್ತೆ, ಅವರ ಪುತ್ರಿಯೊಂದಿಗೆ ಪರಾರಿಯಾಗಿರುವುದು ಪೊಲೀಸರಿಗೆ ತಿಳಿದುಬಂದಿದೆ.

ಇವರಿಗಾಗಿಯೇ ಹಣವನ್ನು ಕದ್ದಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಇನ್ನು, ವಿಶೇಷ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದೇವೆ ಎಂದು ಡಿಸಿಪಿ ಧಮೇರ್ಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News