ಕಳವು ಆರೋಪಿ ಬಂಧನ, 1.80 ಲಕ್ಷ ರೂ. ವಶ
Update: 2021-02-11 11:48 IST
ಶಿವಮೊಗ್ಗ, ಫೆ.11 : ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ರೆಡ್ ಪಾಂಡಾ ಸೂಪರ್ ಮಾರ್ಕೆಟ್‍ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿ 1.80ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ನಿವಾಸಿ ಉದಯ್ ಕುಮಾರ್ (29) ಬಂಧಿತ ಆರೋಪಿ. ಜ. 1ರಂದು ರಾತ್ರಿ ಸೂಪರ್ ಮಾರ್ಕೆಟ್ ಕಿಟಿಕಿಯನ್ನು ಮುರಿದು ಒಳಪ್ರವೇಶಿಸಿ 3.85 ಲಕ್ಷ ರೂ. ಕಳ್ಳತನವಾದ ಬಗ್ಗೆ ದೂರು ದಾಖಲಾಗಿತ್ತು.
ಪೊಲೀಸ್ ಉಪಾಧೀಕ್ಷಕ ಉಮೇಶ್ ಈಶ್ವರ ನಾಯಕ್, ಪೊಲೀಸ್ ನಿರೀಕ್ಷಕ ವಸಂತ ಕುಮಾರ್ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಮಂಜಮ್ಮ, ಎಎಸ್‍ಐ ವಾಚಾನಾಯ್ಕ ಹಾಗೂ ಸಿಬ್ಬಂದಿ ರಮೇಶ್ ಮತ್ತು ನಿತಿನ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.