ವಿಜಯಪುರ: ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸದ್ಭಾವನಾ ಮಂಚ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ
ವಿಜಯಪುರ, ಫೆ.11: ವಿಜಯಪುರ ನಗರದ ರಸ್ತೆಗಳ ದುರಸ್ತಿ ಹಾಗೂ ನಗರ ನಿರ್ಮಲೀಕರಣ ಕುರಿತು ಜಿಲ್ಲಾಧಿಕಾರಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸದ್ಭಾವನಾ ಮಂಚ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಗುರುವಾರ ವಿಜಯಪುರ ಜಿಲ್ಲಾ ಸದ್ಭಾವನಾ ಮಂಚ್ ಇದರ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆ ಪೌರಾಯುಕ್ತರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಹಿರಿಯ ನ್ಯಾಯವಾದಿ, ಸದ್ಭಾವನಾ ಮಂಚ್ ಸಹಸಂಚಾಲಕ ವಿ.ಎಸ್ ಖಾಡೆ ಮಾತನಾಡಿ ಜಿಲ್ಲಾ ಸದ್ಭಾವನಾ ಮಂಚ್ ವೇದಿಕೆಯು ವಿವಿಧ ಧರ್ಮ, ಜಾತಿ ಹಾಗೂ ವಿವಿಧ ಭಾಷೆಯ ಪ್ರಜೆಗಳಲ್ಲಿ ಸಾಮರಸ್ಯ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದು, ಜೊತೆಗೆ, ಜನರ ಸಮಸ್ಯೆಗಳ ಪರಿಹಾರಕ್ಕೆ ಚಿಂತಿಸುತ್ತಿದೆ ಎಂದರು
ಹಿರಿಯ ನ್ಯಾಯವಾದಿ ಕೆ.ಎಫ್ ಅಂಕಲಗಿ ಮಾತನಾಡಿ, ಐತಿಹಾಸಿಕ ನಗರವು ಕನಿಷ್ಠ ನಾಗರಿಕ ಸೌಲಭ್ಯಗಳ ಕೊರತೆಯಿಂದಾಗಿ ದಿನೇ ದಿನೇ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸಿದರು.
ಕರ್ನಾಟಕ ವಿಕಾಸ ವೇದಿಕೆಯ ಪೀಟರ್ ಅಲೆಕ್ಸಾಂಡರ್, ಹಿರಿಯ ನ್ಯಾಯವಾದಿ ವಿದ್ಯಾವತಿ ಅಂಕಲಗಿ, ಸದ್ಭಾವನಾ ಮಂಚ್ ಪ್ರಧಾನ ಕಾರ್ಯದರ್ಶಿ, ಜಮಾತೆ ಇಸ್ಲಾಮಿ ಮುಖಂಡ ಇಮಾಮ ಕಾಸಿಮ್ ಹುಲಿಕಟ್ಟಿ ಮಾತನಾಡಿದರು.
ಜಮಾತೆ ಇಸ್ಲಾಮಿ ಆಸ್ಥಾನೀಯ ಅಧ್ಯಕ್ಷ ಯೂಸುಫ್ ಖಾಝಿ, ಸದ್ಭನಾ ಮಂಚ್ ಪದಾಧಿಕಾರಿಗಳು ಹಾಗೂ ಸದಸ್ಯರು, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು, ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.