ಕಾನೂನುಬಾಹಿರ ಮದ್ಯದಂಗಡಿಗಳ ಪರವಾನಿಗೆ ರದ್ದು: ಸಚಿವ ಕೆ.ಗೋಪಾಲಯ್ಯ

Update: 2021-02-12 16:47 GMT

ಬೆಂಗಳೂರು, ಫೆ.12: ರಾಜ್ಯದಲ್ಲಿ ಯಾವುದೇ ಹೊಸ ಲೈಸೆನ್ಸ್ ನೀಡುವ ಪ್ರಸ್ತಾವ ಇಲಾಖೆ ಮುಂದಿಲ್ಲ. ಈಗಾಗಲೇ ಹಳೆ ನಿಯಮದಂತೆ ಅಐ-07 ಲೈಸೆನ್ಸ್ ನೀಡುತ್ತಿದ್ದು, ಕಾನೂನು ಮೀರಿ ಹಾಗೇನಾದರೂ ಪರವಾನಿಗೆ ನೀಡಿದ್ದರೆ ಅಂತಹ ಪರವಾನಿಗೆ ರದ್ದು ಮಾಡಲಾಗುವುದು ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಮದ್ಯದಂಗಡಿ ಪರವಾನಿಗೆ ನೀಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮಾಹಿತಿ ಇದ್ದರೆ ಹಂಚಿಕೊಳ್ಳಬಹುದೆಂದು ತಿಳಿಸಿದ್ದಾರೆ.

ನಾನು ಅಬಕಾರಿ ಇಲಾಖೆ ವಹಿಸಿಕೊಂಡು 22 ದಿನ ಕಳೆದಿದೆ. ಸರಕಾರಕ್ಕೆ ಜಿಎಸ್‍ಟಿ ನಂತರ ಹೆಚ್ಚು ರಾಜಸ್ವ ತರುವುದು ಅಬಕಾರಿ ಇಲಾಖೆಯಾಗಿದೆ. ಹೀಗಾಗಿ ಇಲಾಖೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ಅಂಕಿ, ಅಂಶಗಳನ್ನು ಆಧರಿಸಿ ಮುಂಬರುವ ಎರಡು ಮೂರು ತಿಂಗಳಲ್ಲಿ ಇಲಾಖೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಅವರು ತಿಳಿಸಿದ್ದಾರೆ.

ಇಲಾಖೆಯಲ್ಲಿ ನಾನು ಬಂದ ಮೇಲೆ ಯಾವುದೇ ವರ್ಗಾವಣೆ ನಡೆದಿಲ್ಲ. ರಾಜ್ಯದಲ್ಲಿ ಹಾಗೂ ನನ್ನ ಕ್ಷೇತ್ರದಲ್ಲಿ 18ರಿಂದ 25 ವರ್ಷದ ಯುವಕ ಯುವತಿಯರು ಮಾದಕ ವಸ್ತುಗಳಾದ ಗಾಂಜಾ ಚಟಕ್ಕೆ ಬಿದ್ದು ವ್ಯಸನರಾಗುತಿದ್ದು, ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ಹತೋಟಿಗೆ ತರಲು ಸ್ವಲ್ಪ ಕಾಲಾವಕಾಶ ನೀಡಿ, ನಂತರ ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News