ವಿದೇಶಗಳಲ್ಲಿ ಪೌರತ್ವ ಪಡೆಯಲು ಮುಂದಾಗುತ್ತಿರುವವರಲ್ಲಿ ʼಭಾರತೀಯ ಶ್ರೀಮಂತರೇʼ ಮೊದಲು: ವರದಿ

Update: 2021-02-13 10:17 GMT

ಮುಂಬೈ: ಕೋವಿಡ್ ಸಾಂಕ್ರಾಮಿಕದಿಂದ ಅಂತಾರಾಷ್ಟ್ರೀಯ ಪ್ರವಾಸ ಕೈಗೊಳ್ಳುವವರ ಸಂಖ್ಯೆ ಕಡಿಮೆಯಾಗಿದ್ದರೂ ಹೊಸ ದೇಶಗಳಲ್ಲಿ ವಾಸಿಸಲು ಅಥವಾ ಅಲ್ಲಿನ ಪೌರತ್ವ ಪಡೆಯುವ ನಿಟ್ಟಿನಲ್ಲಿ 2019ರಲ್ಲಿ ವಿಚಾರಿಸಿದ ಮಂದಿಯ ಪೈಕಿ ಶ್ರೀಮಂತ ಭಾರತೀಯರೇ ಮೊದಲ ಪಟ್ಟಿಯಲ್ಲಿದ್ದಾರೆಂದು ಹೆನ್ಲಿ ಎಂಡ್ ಪಾಟ್ನರ್ಸ್ ಸಂಸ್ಥೆ ನೀಡಿದ ಮಾಹಿತಿ ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಹೂಡಿಕೆಗಳ ಮೂಲಕ  ವಾಸಿಸಲು ಅಥವಾ ಹೂಡಿಕೆ ಮೂಲಕ ಪೌರತ್ವ ಪಡೆಯಲು ಸಾಧ್ಯತೆಯ ಕುರಿತು  ವಿಚಾರಿಸಿದ ಭಾರತೀಯರ ಸಂಖ್ಯೆ  2019ಗೆ ಹೋಲಿಸಿದಾಗ 2020ರಲ್ಲಿ ಅಧಿಕವಾಗಿದೆ ಎಂದು ಈ ನಿಟ್ಟಿನಲ್ಲಿ ಸಹಾಯ ಒದಗಿಸುವ ಜಾಗತಿಕ ಸಂಸ್ಥೆಯಾಗಿರುವ ಹೆನ್ಲಿ ಎಂಡ್ ಪಾಟ್ನರ್ಸ್ ಹೇಳಿದೆ. ಭಾರತ  ದ್ವಿಪೌರತ್ವ ಹೊಂದುವುದಕ್ಕೆ  ಅನುಮತಿ ನೀಡದೇ ಇರುವುದರಿಂದ ಹೂಡಿಕೆ ಮೂಲಕ ಇತರ ದೇಶಗಳ  ಪೌರತ್ವ ಪಡೆದಲ್ಲಿ ಭಾರತೀಯ ಪಾಸ್‍ಪೋರ್ಟ್ ಅನ್ನು ಕೈಬಿಡಬೇಕಾಗುತ್ತದೆ.

ಈ ರೀತಿ ಇತರ ದೇಶಗಳ ಪೌರತ್ವ ಪಡೆಯಲು ವಿಚಾರಿಸಿದ ಅಮೆರಿಕನ್ನರ ಸಂಖ್ಯೆ ಕೂಡ ಕೋವಿಡ್ ಹಾಗೂ ರಾಜಕೀಯ ಬಿಕ್ಕಟ್ಟಿನಿಂದಾಗಿ ಏರಿಕೆಯಾಗಿದ್ದು 2019ರಲ್ಲಿ ಆರನೇ ಸ್ಥಾನದಲ್ಲಿದ್ದ ಅಮೆರಿಕಾ 2020ರಲ್ಲಿ ಎರಡನೇ ಸ್ಥಾನಕ್ಕೇರಿತ್ತು.

ಹೂಡಿಕೆ ಮೂಲಕ ವಾಸಕ್ಕಾಗಿ ಹೆಚ್ಚಿನ ಜನರು ಕೆನಡಾ, ಪೋರ್ಚುಗಲ್ ಮತ್ತು ಆಸ್ಟ್ರಿಯಾ ಆಯ್ಕೆ ಮಾಡಲು ಬಯಸಿದ್ದರೆ ಪೌರತ್ವಕ್ಕಾಗಿ ಆಸ್ಟ್ರಿಯಾ, ಮಾಲ್ಟಾ ಮತ್ತು ಟರ್ಕಿ ದೇಶಗಳಿಗೆ ಹೆಚ್ಚು ಬೇಡಿಕೆಯಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News