ತನಿಖೆ ಭಾಗವಾಗಿ ಘಟನೆಯ 'ಮರುಸೃಷ್ಟಿ'ಗೆ ದೀಪ್ ಸಿಧುವನ್ನು ಕೆಂಪು ಕೋಟೆಗೆ ಕರೆದೊಯ್ದ ಪೊಲೀಸರು

Update: 2021-02-13 18:45 GMT
photo: indianexpress

ಹೊಸದಿಲ್ಲಿ, ಫೆ. 13: ಗಣರಾಜ್ಯೋತ್ಸವದ ದಿನ ಕೆಂಪು ಕೋಟೆಯಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರಿಂದ ಬಂಧಿತರಾಗಿರುವ ನಟ ಹಾಗೂ ಸಾಮಾಜಿಕ ಹೋರಾಟಗಾರ ದೀಪ್ ಸಿಧು ಅವರನ್ನು ತನಿಖೆಯ ಭಾಗವಾಗಿ ಶನಿವಾರ ಕೆಂಪುಕೋಟೆಗೆ ಕರೆದೊಯ್ಯಲಾಗಿದೆ.

ಕೆಂಪು ಕೋಟೆಗೆ ಕರೆದೊಯ್ಯುವ ಮುನ್ನ ದಿಲ್ಲಿ ಜನವರಿ 26ರಂದು ಕೆಂಪು ಕೋಟೆ ತಲುಪಲು ಸಾಗಿದ ಮಾರ್ಗದ ಬಗ್ಗೆ ತಿಳಿಯಲು ಪೊಲೀಸ್‌ನ ಕ್ರೈಮ್ ಬ್ರಾಂಚ್ ದೀಪ್ ಸಿಧು ಅವರನ್ನು ಕರೆದೊಯ್ದಿತು.

ರೈತರ ಟ್ರಾಕ್ಟರ್ ರ್ಯಾಲಿ ನಡೆದ ಗಣರಾಜ್ಯೋತ್ಸವದ ದಿನ ಕೆಂಪು ಕೋಟೆ ತಲುಪಲು ಸಾಗಿದ ಮಾರ್ಗವನ್ನು ಇಕ್ಬಾಲ್ ಹಾಗೂ ದೀಪ್ ಸಿದು ಇಬ್ಬರೂ ತೋರಿಸಿದ್ದಾರೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ.

ದೀಪ್ ಸಿಧುವನ್ನು ಹರ್ಯಾಣದ ಕರ್ನಲ್‌ನಲ್ಲಿ ಫೆಬ್ರವರಿ 9ರಂದು ಬಂಧಿಸಲಾಗಿತ್ತು ಹಾಗೂ ದಿಲ್ಲಿ ನಗರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News