ಪ್ರೇಮಿಗಳ ದಿನಾಚರಣೆ ಬದಲು ‘ಮಾತಾ-ಪಿತಾ' ಪೂಜೆಗೆ ಶ್ರೀರಾಮಸೇನೆ ನಿರ್ಧಾರ

Update: 2021-02-13 14:43 GMT

ಬೆಂಗಳೂರು, ಫೆ.13: ರಾಜ್ಯ ವ್ಯಾಪಿ ಪ್ರೇಮಿಗಳ ದಿನಾಚರಣೆ ಫೆ.14ರಂದು ‘ಮಾತಾ-ಪಿತಾ' ಪೂಜೆಯನ್ನು ಆಚರಿಸುವುದಾಗಿ ಶ್ರೀ ರಾಮಸೇನೆ ತಿಳಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಶ್ರೀ ರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರತಿ ವರ್ಷದಂತೆ ಈ ಬಾರಿಯೂ 'ಮಾತಾ-ಪಿತಾ' ಪೂಜೆಯನ್ನು ಆಯೋಜಿಸುತ್ತೇವೆ. ಪ್ರಮುಖ 50ರಿಂದ 60 ಸ್ಥಳಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಅಶ್ಲೀಲ ಚಟುವಟಿಕೆಗಳು ನಡೆಯದಂತೆ ತಡೆಯಲು ಪಬ್‍ಗಳು, ಬಾರ್ ಗಳು, ಮಾಲ್‍ಗಳು, ಐಸ್‍ಕ್ರೀಮ್ ಪಾರ್ಲರ್ ಗಳು ಮತ್ತು ಉದ್ಯಾನವನಗಳಂತಹ ಸಂಭಾವ್ಯ ಸ್ಥಳಗಳಲ್ಲಿ ಸಂಸ್ಥೆಗಳ ಸ್ವಯಂಸೇವಕರು ಇರುತ್ತಾರೆ ಎಂದ ಅವರು, ಸಂಘಟನೆಯ ಸದಸ್ಯರು ಕಾನೂನನ್ನು ಕೈಗೆತ್ತಿಕೊಳ್ಳುವುದಿಲ್ಲ. ಆದರೆ ಅಂತಹ ಘಟನೆಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಇನ್ನು, ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಯಾರು ಸಹ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ. ಯಾರಿಗಾದರೂ ಈ ಬಗ್ಗೆ ಕುಂದು ಕೊರತೆಗಳು ಉಂಟಾದರೆ ಪೊಲೀಸರಿಗೆ ತಿಳಿಸಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News