ಜಾಗತಿಕ ರಸ್ತೆ ಅಪಘಾತಗಳ 10 ಶೇಕಡ ಸಂತ್ರಸ್ತರು ಭಾರತೀಯರು: ವಿಶ್ವಬ್ಯಾಂಕ್ ವರದಿ

Update: 2021-02-13 16:57 GMT

ವಾಶಿಂಗ್ಟನ್, ಫೆ. 13: ಜಗತ್ತಿನಲ್ಲಿರುವ ಒಟ್ಟು ವಾಹನಗಳ ಒಂದು ಶೇಕಡ ಭಾರತದಲ್ಲಿರುವುದಾದರೂ, ಜಾಗತಿಕ ರಸ್ತೆ ಅಪಘಾತಗಳ 10 ಶೇಕಡದಷ್ಟು ಸಂತ್ರಸ್ತರು ಭಾರತೀಯರು ಎಂದು ರಸ್ತೆ ಸುರಕ್ಷತೆ ಕುರಿತ ವಿಶ್ವಬ್ಯಾಂಕ್‌ನ ವರದಿಯೊಂದು ಹೇಳಿದೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸುವ ಹಲವು ಮಹತ್ವದ ಕ್ರಮಗಳನ್ನು ಭಾರತ ಸರಕಾರವು ಇತ್ತೀಚಿನ ವರ್ಷಗಳಲ್ಲಿ ತೆಗೆದುಕೊಂಡಿದೆ ಎಂದು ಶನಿವಾರ ಬಿಡುಗಡೆಗೊಂಡ ವರದಿಯಲ್ಲಿ ವಿಶ್ವಬ್ಯಾಂಕ್‌ನ ದಕ್ಷಿಣ ಏಶ್ಯಕ್ಕಾಗಿನ ಅಧ್ಯಕ್ಷ ಹಾರ್ಟ್‌ವಿಗ್ ಶಾಫರ್ ಹೇಳಿದ್ದಾರೆ.

ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಗಮನ ಬೇರೆ ಕಡೆಗೆ ಹರಿದಿದ್ದರೂ, ಈಗ ಕೋವಿಡ್-19 ಮತ್ತು ರಸ್ತೆ ಸುರಕ್ಷತೆ ನಡುವೆ ಆಸಕ್ತಿದಾಯಕ ಕೊಂಡಿಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದುರದೃಷ್ಟವಶಾತ್, ರಸ್ತೆ ಅಪಘಾತ ಸಂಖ್ಯೆಯಲ್ಲಿ ಯಾವುದೇ ಇಳಿಕೆಯಾಗುತ್ತಿಲ್ಲ ಹಾಗೂ ದೇಶದ ಆಸ್ಪತ್ರೆಗಳ ಸಾಮರ್ಥ್ಯದ 10 ಶೇಕಡವನ್ನು ಯಾವಾಗಲೂ ಅಪಘಾತ ಸಂತ್ರಸ್ತರ ಚಿಕಿತ್ಸೆಗಾಗಿಯೇ ಬಳಸಲಾಗುತ್ತಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News