ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ತಾಯಿ, ಮಗ ಸ್ಥಳದಲ್ಲೇ ಮೃತ್ಯು

Update: 2021-02-14 11:48 GMT

ಅಂಕೋಲಾ: ಯಕ್ಷಗಾನ ನೋಡಿ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬಡಿದು ತಾಯಿ, ಮಗ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ರಾ.ಹೆ66 ರಾಮನಗುಳಿಯಲ್ಲಿ ನಡೆದಿದೆ.

ಅಚವೆ ಅಂಗಡಿಬೈಲ ನಿವಾಸಿಗಳಾದ ಹರಿಹರ ರವಿ ಸಿದ್ದಿ ಮತ್ತು ಅವರ ತಾಯಿ ಬೇಬಿ ರವಿ ಸಿದ್ದಿ ಮೃತಪಟ್ಟವರು.

ಇವರು ಕೊಡ್ಲಗದ್ದೆಯಲ್ಲಿ ಯಕ್ಷಗಾನ ನೊಡಲು ಅಂಗಡಿಬೈಲನಿಂದ ಬಂದಿದ್ದರು. ಯಕ್ಷಗಾನ ಮುಗಿದ ಬಳಿಕ ನಸುಕಿನ ವೇಳೆಯಲ್ಲಿ ಬೈಕ್ ನಲ್ಲಿ ಮನೆಗೆ ಮರಳುವಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. 

ಸಿಪಿಐ ಕೃಷ್ಣಾನಂದ ನಾಯಕ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News