ಸತತ ಒಂಬತ್ತನೇ ದಿನ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ

Update: 2021-02-17 09:00 GMT

ಹೊಸದಿಲ್ಲಿ: ತೈಲ ಮಾರುಕಟ್ಟೆ ಕಂಪೆನಿಗಳು ಇಂದು ಕೂಡ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಸಿವೆ. ಸತತ ಒಂಬತ್ತನೇ ದಿನ ಇಂಧನ ಬೆಲೆ ಏರಿಕೆ ಕಂಡಿದ್ದು ಇಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಲಾ 25 ಪೈಸೆಯಷ್ಟು ಏರಿಕೆ ಕಂಡಿವೆ.

ರಾಜಧಾನಿ ದಿಲ್ಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ 89.54 ಆಗಿದ್ದರೆ ಮುಂಬೈಯಲ್ಲಿ ಗರಿಷ್ಠ ರೂ 96 ತಲುಪಿದೆ.  ಕೊಲ್ಕತ್ತಾ, ಚೆನ್ನೈ, ಬೆಂಗಳೂರು, ಭುಬನೇಶ್ವರ್, ಹೈದರಾಬಾದ್, ಜೈಪುರ್, ಪಾಟ್ನಾ ಮತ್ತು ತಿರುವನಂತಪುರಂನಲ್ಲಿ ಪೆಟ್ರೋಲ್ ಬೆಲೆ ರೂ. 90ರ ಗಡಿ ದಾಟಿದೆ.

ಡೀಸೆಲ್ ಬೆಲೆಗಳು ಈಗ ದಿಲ್ಲಿಯಲ್ಲಿ ಲೀಟರ್‌ಗೆ ರೂ  79.95 ಆಗಿದ್ದರೆ, ದಿಲ್ಲಿ ಹಾಗೂ ಚಂಡೀಗಢ ಹೊರತುಪಡಿಸಿ ಇತರೆಡೆಗಳಲ್ಲಿ ರೂ. 80 ದಾಟಿದೆ.

ಕೊಲ್ಕತ್ತಾದಲ್ಲಿ ಇಂದು ಡೀಸೆಲ್ ಬೆಲೆ ಲೀಟರ್‌ಗೆ ರೂ. 83.54  ಆಗಿದ್ದರೆ ಮುಂಬೈಯಲ್ಲಿ ರೂ. 87 ಆಗಿದೆ. ಚೆನ್ನೈಯಲ್ಲಿ ಮೊದಲ ಬಾರಿ ಡೀಸೆಲ್ ಬೆಲೆ ರೂ. 85ರ ಗಡಿ ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 60 ಡಾಲರ್ ದಾಟಿದ್ದು ಬೇಡಿಕೆಗನುಗುಣವಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ಭಾರತದಲ್ಲಿ ಇಂಧನದ ಮೇಲೆ ವಿಧಿಸಲಾಗುವ ತೆರಿಗೆಯಿಂದಾಗಿ ಬೆಲೆಗಳು ಬಹಳಷ್ಟು ಏರಿಕೆ ಕಾಣುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News