×
Ad

ವರ್ಷದ ಲೇಖಕ ಪ್ರಶಸ್ತಿಗೆ ಸಿ.ಚಂದ್ರಪ್ಪ, ಯುವ ಲೇಖಕ ಪ್ರಶಸ್ತಿಗೆ ಕಪಿಲ ಹುಮನಾಬಾದೆ ಆಯ್ಕೆ

Update: 2021-02-17 19:06 IST

ಬೆಂಗಳೂರು, ಫೆ.17: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಕೊಡಮಾಡುವ ವರ್ಷದ ಲೇಖಕ ಪ್ರಶಸ್ತಿಗೆ ಸಾಹಿತಿ ಡಾ.ಸಿ.ಚಂದ್ರಪ್ಪ, ಯುವ ಲೇಖಕ ಪ್ರಶಸ್ತಿಗೆ ಕಪಿಲ ಪಿ.ಹುಮನಾಬಾದೆ ಹಾಗೂ ವರ್ಷದ ಪ್ರಕಾಶಕ ಪ್ರಶಸ್ತಿಗೆ ಪ್ರಕಾಶ್ ಕಂಬತ್ತಳ್ಳಿ ಆಯ್ಕೆಯಾಗಿದ್ದಾರೆ.

ಡಾ.ಸಿ.ಚಂದ್ರಪ್ಪನವರ ಮಹಾಮಾನವನ ಮಹಾಯಾನ, ಕಪಿಲ ಪಿ.ಹುಮನಾಬಾದೆಯವರ ಹಾಣಾದಿ ಕೃತಿ ಹಾಗೂ ಪ್ರಕಾಶ್ ಕಂಬತ್ತಳ್ಳಿರವರ ಅಂಕಿತ ಪ್ರಕಾಶನಕ್ಕೆ ಈ ಪ್ರಶಸ್ತಿಗಳು ಸಂದಿವೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಪುರಸ್ಕಾರವನ್ನು ಒಳಗೊಂಡಿರುತ್ತದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಫೆ.20ರಂದು ಬೆಳಗ್ಗೆ 11ಕ್ಕೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ನಾಡೋಜ ಡಾ.ಬರಗೂರು ರಾಮಚಂದ್ರಪ್ಪ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ್, ಡಾ.ವಿಜಯಮ್ಮ, ನಿಡಸಾಲೆ ಪುಟ್ಟಸ್ವಾಮಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News