ಶಿವಮೊಗ್ಗ: ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
Update: 2021-02-17 20:11 IST
ಶಿವಮೊಗ್ಗ,ಫೆ.17: ನಗರದ ಮಾರ್ನಮಿಬೈಲಿನಲ್ಲಿ ಮಂಗಳವಾರ ರಾತ್ರಿ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಾರ್ನಮಿಬೈಲಿನಲ್ಲಿರುವ ಇರುವ ವೆಂಕಟೇಶ್ವರ ದೇವಾಲಯದ ತಿರುವಿನ ಬಳಿ ಅಭಿಲಾಶ್ (23) ಮತ್ತು ರಾಕೇಶ್ (22) ಎಂಬವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಇಬ್ಬರನ್ನು ಮೆಗ್ಗಾನ್ ಗೆ ದಾಖಲಿಸಲಾಗಿದೆ
ಅಭಿಲಾಶ್ ಮುಖಕ್ಕೆ ಹಾಗೂ ತಲೆಗೆ ಮಾರಕಾಸ್ತ್ರದಿಂದ ಬಲವಾಗಿ ಹಲ್ಲೆ ನಡೆಸಲಾಗಿದೆ. ಕಣ್ಣಿಗೆ, ಮೂಗಿಗೆ ಬಲವಾದ ಪೆಟ್ಟುಬಿದ್ದಿದೆ. ಅಭಿಲಾಶ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ.
ಇಬ್ವರೂ ಸಹ ಆರ್ಎಂಎಲ್ ನಗರದ ನಿವಾಸಿಗಳಾಗಿದ್ದಾರೆ. ದೊಡ್ಡಪೇಟೆ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.