ಫೆ.14ರಿಂದ ಎಸೆಸೆಲ್ಸಿ, ಪಿಯು ತರಗತಿಗಳಿಗೆ ಉಚಿತ ಆಫ್‍ಲೈನ್-ಆನ್‍ಲೈನ್ ಪಾಠ

Update: 2021-02-17 18:11 GMT

ಬೆಂಗಳೂರು, ಫೆ.17: ಉದಯಭಾನು ಕಲಾಸಂಘದ ವತಿಯಿಂದ 2020-21ನೇ ಸಾಲಿನ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗಾಗಿ ಫೆ.14ರಿಂದ 90ದಿನಗಳವರೆಗೆ ಉಚಿತ ಆಫ್‍ಲೈನ್ ಹಾಗೂ ಆನ್‍ಲೈನ್ ಪಾಠ ಪ್ರವಚನಗಳನ್ನು ನಡೆಸಲಾಗುತ್ತದೆ.

ತರಗತಿಗಳು ವಾರದ ದಿನಗಳಲ್ಲಿ ಸಂಜೆ 4.30ರಿಂದ ಮತ್ತು ರವಿವಾರಗಳಂದು ಬೆಳಗ್ಗೆ 9ಗಂಟೆಯಿಂದ ನಡೆಯುತ್ತದೆ. ಸರಕಾರದ ಇಂದಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಪಾಠ ಪ್ರವಚನಗಳನ್ನು ಕೈಗೊಳ್ಳಲಾಗುತ್ತದೆ.

ಆಫ್‍ಲೈನ್ ತರಗತಿಗಳನ್ನು ಕೋವಿಡ್-19ರ ಶಿಸ್ತಿಗೆ ಬದ್ಧರಾಗಿ ನಡೆಸಲಾಗುತ್ತದೆ. ಹಾಗೆಯೇ ಇದೇ ತರಗತಿಗಳನ್ನು ನಾಡಿನ ಎಲ್ಲ 231 ತಾಲೂಕುಗಳಲ್ಲಿ ಆನ್‍ಲೈನ್‍ನಲ್ಲೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಆನ್‍ಲೈನ್ ತರಗತಿಗಳಿಗೆ ಸೇರಲು https://aircast.in/preprooms:sslc_ or PUSCL_or PUCOM_ ನಲ್ಲಿ ಪ್ರವೇಶ ಪಡೆಯಬಹುದು. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ದೂ.080-26609343, 94488-52828, 98808-92180ಗೆ ಸಂಪರ್ಕಿಸಲು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News