ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಉದ್ಯಮಿಗಳ ಮನೆ ಮೇಲಿನ ಐಟಿ ದಾಳಿ ಪ್ರಕರಣ: 402 ಕೋಟಿ ರೂ.ತೆರಿಗೆ ವಂಚನೆ ಬೆಳಕಿಗೆ

Update: 2021-02-18 17:37 GMT

ಬೆಂಗಳೂರು, ಫೆ.18: ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಿಗಳ ಮನೆ, ಕಚೇರಿ ಮೇಲೆ ದಾಳಿ ಪ್ರಕರಣ ಸಂಬಂಧ 402 ಕೋಟಿ ರೂ. ತೆರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು ಐಟಿ(ಆದಾಯ ತೆರಿಗೆ) ಇಲಾಖೆ ತಿಳಿಸಿದೆ.

ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಐಟಿ, ದಾಳಿ ವೇಳೆ 15 ಕೋಟಿ ಹಣ ವಶಪಡಿಸಿಕೊಳ್ಳಲಾಗಿದ್ದು, 30 ಕೋಟಿ ಮೌಲ್ಯದ 81 ಕೆ.ಜಿ ಚಿನ್ನಾಭರಣ, 40 ಕೆ.ಜಿ, ಬೆಳ್ಳಿ ಮತ್ತು ಡೈಮಂಡ್ ಪತ್ತೆಯಾಗಿದೆ ಎಂದು ತಿಳಿಸಿದೆ.

ಅದೇ ರೀತಿ, ಶಿಕ್ಷಣ ಸಂಸ್ಥೆಗಳು ಆನ್‍ಲೈನ್ ಮೂಲಕ ವಂಚಿಸಿ ಹಣ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಉದ್ಯಮಿಗಳ ಮನೆ, ಕಚೇರಿಗಳಲ್ಲಿ ಸಾಕಷ್ಟು ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ದಾಖಲೆ ಇಲ್ಲದ ಸುಮಾರು 2.9 ಕೋಟಿ ಹಣ ದೊರೆತಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದ್ದು, ಈ ಸಂಬಂಧ ತನಿಖೆ ಮುಂದುವರಿಸಿರುವುದಾಗಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News