2020ರಲ್ಲಿ ಭೂಮಿ ದಶಕಗಳಲ್ಲೇ ಅತ್ಯಂತ ಮೌನವಾಗಿತ್ತು: ಭೂ ವಿಜ್ಞಾನಿಗಳ ಹೇಳಿಕೆ

Update: 2021-02-19 16:09 GMT
ಸಾಂದರ್ಭಿಕ ಚಿತ್ರ

ಝೂರಿಕ್ (ಸ್ವಿಟ್ಸರ್‌ಲ್ಯಾಂಡ್), ಫೆ. 19: ಭೂಮಿಯು ದಶಕಗಳಲ್ಲೇ ಮೊದಲ ಬಾರಿಗೆ 2020ರಲ್ಲಿ ಅತ್ಯಂತ ಮೌನದ ಅವಧಿಯನ್ನು ಕಳೆಯಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಅವಧಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡುವುದನ್ನು ತಡೆಯಲು ವಿಧಿಸಲಾಗಿದ್ದ ಲಾಕ್‌ಡೌನ್ ಮಾನವ ಚಟುವಟಿಕೆಗಳು ಮತ್ತು ಭೂಮಿಯ ಮೇಲಿನ ಅದರ ಪರಿಣಾಮವನ್ನು ಗಣನೀಯವಾಗಿ ಕಡಿತಗೊಳಿಸಿತ್ತು.

ಜಗತತ್ತಿನಾದ್ಯಂತ ಲಾಕ್‌ಡೌನ್ ಜಾರಿಗೊಂಡ ಬಳಿಕ, ಮಾನವರ ಪ್ರಯಾಣ ಬಹುತೇಕ ನಿಂತಿತು ಮತ್ತು ಕಾರ್ಖಾನೆಗಳು ಮುಚ್ಚಿದವು. ಹಾಗಾಗಿ, ಅವುಗಳೀಂದಾಗಿ ಸೃಷ್ಟಿಯಗುವ ಸದ್ದಿನಲ್ಲಿ 50 ಶೇಕಡ ಕುಸಿತವಾಗಿರುವುದನ್ನು 33 ದೇಶಗಳ ಭೂವಿಜ್ಞಾನಿಗಳ ತಂಡವು ಪತ್ತೆಹಚ್ಚಿದೆ.

ಜಗತ್ತಿನಾದ್ಯಂತ ಇರುವ ಭೂಕಂಪನ ಅಳೆಯುವ ಕೇಂದ್ರಗಳ ಪೈಕಿ 268 ಕೇಂದ್ರಗಳ ಅಂಕಿಅಂಶಗಳನ್ನು ವಿಜ್ಞಾನಿಗಳ ತಂಡವು ವಿಶ್ಲೇಷಣೆ ಮಾಡಿದೆ. ಈ ಪೈಕಿ 185 ಕೇಂದ್ರಗಳಲ್ಲಿ ಸದ್ದಿನ ಮಟ್ಟವು ಕಡಿಮೆಯಾಗಿರುವುದನ್ನು ಅವರು ಪತ್ತೆಹಚ್ಚಿದ್ದಾರೆ.

 ತೀವ್ರ ಲಾಕ್‌ಡೌನ್ ಜಾರಿಯಲ್ಲಿದ್ದ ವಾರಗಳಲ್ಲಿ, ನಗರಗಳಲ್ಲಿರುವ ಭೂಕಂಪನ ಕೇಂದ್ರಗಳಲ್ಲಿ ಸದ್ದಿನ ಮಟ್ಟವು 50 ಶೇಕಡದಷ್ಟು ಕಡಿತವಾಗಿರುವುದನ್ನೂ ಪತ್ತೆಹಚ್ಚಲಾಗಿದೆ. ಈ ಅವಧಿಯಲ್ಲಿ ಬಸ್, ರೈಲು ಮತ್ತು ವಿಮಾನಗಳ ಸಂಚಾರವನ್ನು ನಿಲ್ಲಿಸಲಾಗಿತ್ತು ಹಾಗೂ ಕಾರ್ಖಾನೆಗಳು ಮುಚ್ಚಿದ್ದವು.

ಸಾಮಾನ್ಯವಾಗಿ ಕ್ರಿಸ್ಮಸ್ ವರ್ಷದ ಅತ್ಯಂತ ಮೌನದ ಅವಧಿಯಾಗಿರುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಭೂಮಿಯು ಅದಕ್ಕಿಂತಲೂ ಮೌನವಾಗಿತ್ತು ಎಂದು ಬೆಲ್ಜಿಯಮ್‌ನ ರಾಯಲ್ ಅಬ್ಸರ್ವೇಟರಿಯ ಥಾಮಸ್ ಲೆಕಾಕ್ ನೇತೃತ್ವದ ವಿಜ್ಞನಿಗಳ ತಂಡ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News