ಅಸಮರ್ಪಕ ರಸ್ತೆ: ಅಸ್ವಸ್ಥ ಮಹಿಳೆಯನ್ನು ಡೋಲಿಯಲ್ಲಿ ಹೊತ್ತೊಯ್ದ ಗ್ರಾಮಸ್ಥರು

Update: 2021-02-21 17:41 GMT

ಹನೂರು: ತಾಲೂಕಿನ ಮಲೆ ಮಹದೇಶ್ವರಬೆಟ್ಟ ತಪ್ಪಲಿನಲ್ಲಿರುವ ಪಡಸಲನತ್ತ ಗ್ರಾಮದಲ್ಲಿ ಅಸ್ವಸ್ಥಗೊಂಡ ಮಹಿಳೆಯನ್ನು ಗ್ರಾಮಸ್ಥರು ಡೋಲಿಯಲ್ಲಿ ಹೊತ್ತುಕೊಂಡು ತಮಿಳುನಾಡಿನ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.

ಗ್ರಾಮದ ಮಹದೇವಮ್ಮ ಎಂಬವರು ಹಲವು ತಿಂಗಳಿನಿಂದ ಮಧುಮೆಹದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಶನಿವಾರ ದಿಢೀರನೇ ತೀವ್ರ ಅಸ್ವಸ್ಥಗೊಂಡಿದ್ದಾರೆ. ಆದರೆ ಸಮರ್ಪಕ ರಸ್ತೆ ಹಾಗೂ ಮೊಬೈಲ್ ನೆಟ್‍ವರ್ಕ್ ಇಲ್ಲದ ಪರಿಣಾಮ ಸಂಪರ್ಕಕ್ಕೆ ತೊಂದರೆಯಾಗಿದೆ. ಇದರಿಂದ ಸಂಬಂಧಿಕರು ಹಾಗೂ ಸ್ಥಳೀಯರು ಈಕೆಯನ್ನು ಅರಣ್ಯ ಪ್ರದೇಶದ ನಡುವೆ 13 ಕಿ.ಮೀ ದೂರು ಡೋಲಿಯಲ್ಲಿ ಹೊತ್ತುಕೊಂಡು ಪಾಲಾರ್‍ತನಕ ಕೊಂಡೊಯ್ದು ಬಳಿಕ ವಾಹನದ ಮೂಲಕ ಕೊಳತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಮ.ಬೆಟ್ಟದ ತಪ್ಪಲಿನಲ್ಲಿ ಹಲವು ಗ್ರಾಮಗಳು ಕಾಡಂಚಿನಲ್ಲಿವೆ. ಇಲ್ಲಿಗೆ ವಾಹನ ಹಾಗೂ ಸಮರ್ಪಕ ರಸ್ತೆ ಇಲ್ಲ. ಅನಾರೋಗ್ಯಕ್ಕೆ ತುತ್ತಾದರೆ, ತುರ್ತು ಅವಘಡಗಳು ಸಂಭವಿಸಿದರೆ ತುಂಬಾ ತೊಂದರೆಯನ್ನು ಅನುಭವಿಸಬೇಕಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News