ಓ ಮೆಣಸೇ...

Update: 2021-02-21 19:30 GMT

ರಾಜ್ಯಸಭಾ ಸದಸ್ಯತ್ವ ಸರಕಾರದ ಪರ ತೀರ್ಪುಗಳಿಗೆ ಕೊಡುಗೆಯಾಗಿದ್ದರೆ ಅಷ್ಟಕ್ಕೇ ತೃಪ್ತಿ ಪಟ್ಟುಕೊಳ್ಳ್ಳುತ್ತಿರಲಿಲ್ಲ. - ರಂಜನ್ ಗೊಗೊಯಿ, ಮಾಜಿ ಸಿಜೆಐ
ಅದಕ್ಕಾಗಿ ಇನ್ನು ಬೇರೆಯೇ ಕೊಡುಗೆಗಳನ್ನು ಕೊಡಬೇಕು ಎಂಬ ಸಂದೇಶವೇ?


ಸವಾಲುಗಳಿದ್ದಾಗಲೇ ಕೆಲಸ ಮಾಡಲು ನನಗೆ ಬಹಳ ಇಷ್ಟ. -ಯಡಿಯೂರಪ್ಪ, ಮುಖ್ಯಮಂತ್ರಿ

ನಿಮ್ಮ ಇಷ್ಟಗಳನ್ನು ತೀರಿಸಲು ಭಿನ್ನಮತೀಯರು ಸಕಲ ಪ್ರಯತ್ನವನ್ನು ಮಾಡುತ್ತಿದ್ದಾರೆ.


ನನಗೆ ಕಾಂಗ್ರೆಸ್ ಸಿದ್ಧಾಂತ ಗೊತ್ತಿದೆಯೇ ಹೊರತು ಅಹಿಂದ ಸಿದ್ಧಾಂತ ಗೊತ್ತಿಲ್ಲ. -ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಮುಖಂಡ

ಅಹಿಂದದ ಬಗ್ಗೆ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಕೈಯಿಂದ ಪಾಠ ಹೇಳಿಸಿ.


ಸಿದ್ದರಾಮಯ್ಯ ಕಾಂಗ್ರೆಸ್ ಬಿ ಟೀಂ ಆಗಿರುವುದರಿಂದ ಅಹಿಂದ ಹೆಸರಿನಲ್ಲಿ ಚಳವಳಿ ಆರಂಭಿಸಿದ್ದಾರೆ. -ಆರ್. ಅಶೋಕ್, ಸಚಿವ

ನಿಮ್ಮದು ಆರೆಸ್ಸೆಸ್‌ನ ಬಿ ಟೀಂ ಆಗಿರಬೇಕಲ್ಲವೇ?


ಸೂಕ್ತ ಸಮಯದಲ್ಲಿ ಜಮ್ಮು- ಕಾಶ್ಮೀರಕ್ಕೆ ಮತ್ತೆ ರಾಜ್ಯದ ಸ್ಥಾನಮಾನ ನೀಡಲಾಗುವುದು. -ಅಮಿತ್ ಶಾ, ಕೇಂದ್ರ ಸಚಿವ

ಭಾರತದ ಉಳಿದ ರಾಜ್ಯಗಳಿಗೆ ಅವುಗಳ ಸ್ಥಾನಮಾನ ಸಿಗುವುದು ಯಾವಾಗ?


ಭಾರತದ ಸುಧಾರಣೆಗಾಗಿ ದೊರೆಯುವ ಯಾವುದೇ ಸಣ್ಣ ಅವಕಾಶವನ್ನು ಕೂಡಾ ಪ್ರಧಾನಿ ಮೋದಿ ಬಿಟ್ಟು ಕೊಡುವುದಿಲ್ಲ. -ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವೆ

ಹೌದು, ಪರಿಣಾಮವಾಗಿ ಸುಧಾರಣೆ ಮಾಡಲು ಭಾರತವೇ ಉಳಿದಿಲ್ಲ.


ಎಲ್ಲ ರೋಗಗಳಿಗೂ ಖಾಸಗೀಕರಣವೇ ಮದ್ದಲ್ಲ. - ಎಸ್.ಎಸ್.ಮುಂದ್ರಾ, ಆರ್‌ಬಿಐ ಮಾಜಿ ಡೆಪ್ಯುಟಿ ಗವರ್ನರ್

ಖಾಸಗೀಕರಣವೇ ಒಂದು ರೋಗವಲ್ಲವೇ?


ವೀರಶೈವ ಲಿಂಗಾಯತ ಸಮುದಾಯದ ಸ್ವಾಮೀಜಿಗಳ ಸಭೆಯ ಹಿಂದೆ ನಾನಿದ್ದೇನೆ ಎಂಬುದು ಸುಳ್ಳು. -ಬಿ. ವೈ. ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ

ಹಾಗಾದರೆ ಮುಂದೆ ಇದ್ದೀರಿ ಎಂದಾಯಿತು.


ಸಾಲ ಮಾಡಿಯಾದರೂ ಪಕ್ಷ ಉಳಿಸುವೆ. -ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಒತ್ತೆಯಿಡಲು ಏನಾದರೂ ಉಳಿದಿದೆಯೇ?


ನಾನು ಮನಸ್ಸು ಮಾಡಿದರೆ 24 ಗಂಟೆೆಯಲ್ಲಿ ಐವರು ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಕರೆತರಬಲ್ಲೆ. -ರಮೇಶ್ ಜಾರಕಿಹೊಳಿ, ಸಚಿವ 

ಯಾವಾಗ ಮನಸ್ಸು ಮಾಡುತ್ತೀರಿ ಎಂದು ಕಾಂಗ್ರೆಸ್‌ನೊಳಗಿನ ಶಾಸಕರು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.


ಅಮೆರಿಕದ ಭವಿಷ್ಯವನ್ನು ಉಜ್ವಲಗೊಳಿಸು ವಂತಹ ಹಲವು ಧ್ಯೇಯೋದ್ದೇಶಗಳೊಂದಿಗೆ ಸದ್ಯದಲ್ಲೇ ನಾನು ನಿಮ್ಮ ಮುಂದೆ ಬರಲಿದ್ದೇನೆ. -ಡೊನಾಲ್ಡ್ ಟ್ರಂಪ್, ಅಮೆರಿಕ ಮಾಜಿ ಅಧ್ಯಕ್ಷ

ನೀವು ಅಧಿಕಾರದಿಂದ ಇಳಿದಾಗಲೇ ಅಮೆರಿಕದ ಭವಿಷ್ಯ ಉಜ್ವಲವಾಗುವ ಸೂಚನೆ ಸಿಕ್ಕಿದೆ.


ಕುರುಬರ ಎಸ್ಟಿ ಹೋರಾಟದಲ್ಲಿ ರಾಜಕೀಯವಿಲ್ಲ, ಸಿದ್ದರಾಮಯ್ಯರ ಅಹಿಂದ ಹೋರಾಟದಲ್ಲಿ ರಾಜಕೀಯ ಇದೆ.-ಕೆ. ಎಸ್. ಈಶ್ವರಪ್ಪ, ಸಚಿವ

ಆರೆಸ್ಸೆಸ್ ಕಸಾಯಿಖಾನೆಗಳಿಗೆ ಕುರಿ ಗಳನ್ನು ಸಾಗಿಸುವ ಹೊಣೆಯನ್ನು ನಿಮಗೆ ಒಪ್ಪಿಸಲಾಗಿದೆಯಂತೆ.


ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ಬಿ. ವೈ. ವಿಜಯೇಂದ್ರ ಕರ್ನಾಟಕದ ಮುಂದಿನ ರಾಜಾಹುಲಿ. -ಎಸ್. ಟಿ. ಸೋಮಶೇಖರ್, ಸಚಿವ

ಆರೆಸ್ಸೆಸ್‌ನ ಇಲಿಗಳು ಅದಕ್ಕೆ ಅವಕಾಶ ಕೊಡಬಹುದೇ?


ಬಿಜೆಪಿಯಲ್ಲಿ ಮನೆಯೊಂದು ಮೂರು ಬಾಗಿಲು ಇಲ್ಲ, ನಮ್ಮದು ದೊಡ್ಡ ಮನೆ. -ಸಿ. ಸಿ. ಪಾಟೀಲ್, ಸಚಿವ

ಬಹುಶಃ ಬಾಗಿಲೇ ಇಲ್ಲದ ಮನೆ.


ನಮ್ಮಲ್ಲಿ ಪಕ್ಷವನ್ನು ಸಂಘಟಿಸಲು ಶಕ್ತಿ ಇದೆ ಆದರೆ ಐಕ್ಯತೆ ಇಲ್ಲ. -ಎಚ್. ಡಿ. ದೇವೇಗೌಡ, ಮಾಜಿ ಪ್ರಧಾನಿ 

ಕುಟುಂಬದೊಳಗಿನ ಆಂತರಿಕ ವಿಷಯ ಇದು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ನನ್ನ ನಾಯಕ. ಪಕ್ಷದ ವಿಷಯಕ್ಕೆ ಬಂದಾಗ ಬಿಜೆಪಿ ನನ್ನ ಪಕ್ಷ. -ರಮೇಶ್ ಜಾರಕಿಹೊಳಿ, ಸಚಿವ

ಕಟ್ಟಿಕೊಂಡದ್ದು ಒಂದು, ಇಟ್ಟುಕೊಂಡದ್ದು ಇನ್ನೊಂದು.


ರಾಜ್ಯದಲ್ಲಿ ನಡೆಯುತ್ತಿರುವ ಜಾತಿವಾರು ಮೀಸಲಾತಿ ಹೋರಾಟಗಳು ಸಮಾಜ ಮತ್ತು ಆಡಳಿತಕ್ಕೆ ಕಂಟಕ. -ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ 

ಹೌದು, ಹೋರಾಟವೇ ಇಲ್ಲದೆ ಮೇಲ್‌ಜಾತಿಗೆ 10 ಶೇಕಡ ಮೀಸಲಾತಿ ಕೊಟ್ಟಿರಲ್ಲ, ಹಾಗೆಯೇ ಕೊಟ್ಟು ಬಿಡಿ.


ಯಾವುದೇ ಗೋವು ಕಸಾಯಿಖಾನೆಗೆ ಹೋಗದಂತೆ ನೋಡಿಕೊಳ್ಳಬೇಕು.-ಪ್ರಭು ಚವ್ಹಾಣ್, ಸಚಿವ

ನೇರ ಬೃಹತ್ ಸಂಸ್ಕರಣಾ ಘಟಕಕ್ಕೆ ಸಾಗಿಸಿ ರಫ್ತು ಮಾಡುವ ಉದ್ದೇಶವಿರಬೇಕು.


ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ದೇಶ ನಿಷ್ಠೆಯ ಬಗ್ಗೆ ನನಗೆ ಸಂದೇಹವಿದೆ. -ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ, ಪೇಜಾವರ ಮಠ

ನಿಮ್ಮ ಬ್ರಾಹ್ಮಣ ನಿಷ್ಠೆಯ ಬಗ್ಗೆ ನಮಗೆ ಸಂದೇಹವಿಲ್ಲ.


ನೇಪಾಳ, ಶ್ರೀಲಂಕಾದಲ್ಲಿಯೂ ಬಿಜೆಪಿ ಸರಕಾರ ಸ್ಥಾಪಿಸಲು ಕೇಂದ್ರ ಸಚಿವ ಅಮಿತ್ ಶಾ ಪ್ರಯತ್ನಿಸುತ್ತಿದ್ದಾರೆ. -ಬಿಪ್ಲಬ್ ಕುಮಾರ್ ದೇಬ್, ತ್ರಿಪುರಾ ಮುಖ್ಯಮಂತ್ರಿ
ಬೇಕಾದರೆ ಬಾಂಗ್ಲಾದಲ್ಲೂ ಸ್ಥಾಪಿಸಲಿ. ಭಾರತವನ್ನೊಂದು ಬಿಟ್ಟು ಬಿಡಲಿ.


ಮುಖ್ಯಮಂತ್ರಿಯವರಿಗೆ ಅವರ ಮನೆಯವರೇ ಹಾವು, ಚೇಳುಗಳಾಗಿ ತೊಂದರೆ ಕೊಡುತ್ತಿದ್ದಾರೆ. - ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಬಹುಶಃ ನೀವು ಅವರನ್ನು ಮನರಂಜಿಸುತ್ತಿರಬೇಕು, ಅಲ್ಲವೇ?


ಮೀಸಲಾತಿ ಉಳ್ಳವರ ಪಾಲಾಗಬಾರದು. - ಸಿ. ಟಿ.ರವಿ, ಸಚಿವ
ಮತ್ತೇಕೆ ತಿಂಗಳಿಗೆ 65,000 ರೂಪಾಯಿ ದುಡಿಯುವ ಮೇಲ್‌ಜಾತಿಯ ಶ್ರೀಮಂತರಿಗೆ 10 ಶೇಕಡಾ ಮೀಸಲಾತಿ ಕೊಟ್ಟಿರಿ?


ರಾಹುಲ್ ಗಾಂಧಿ ಕೇರಳದಲ್ಲಿ ಆಶ್ರಯ ಪಡೆದಿರುವ ವಲಸಿಗ ನಾಯಕ. - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ನೀವು ಕರ್ನಾಟಕದಲ್ಲಿದ್ದೂ, ಉತ್ತರ ಭಾರತದ ಊಳಿಗ ಮಾಡುತ್ತಿರುವ ಹೊಲಸಿಗ ನಾಯಕರೇ ಅಲ್ಲವೆ?


ಬಿಜೆಪಿ ರಾಷ್ಟ್ರ ನಿರ್ಮಾಣದ ರಾಜಕೀಯ ಮಾಡುತ್ತಿದೆಯೇ ಹೊರತು ಗೂಂಡಾಗಿರಿ ರಾಜಕಾರಣವಲ್ಲ. - ನಳಿನ್ ಕುಮಾರ್ ಕಟೀಲು, ಸಂಸದ
ರಾಷ್ಟ್ರನಿರ್ಮಾಣಕ್ಕಾಗಿ ಗೂಂಡಾಗಿರಿಯೇ?

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...