ನಕಲಿ ನೋಟು ಚಲಾವಣೆ ಪ್ರಕರಣ: ಇಬ್ಬರು ಆರೋಪಿಗಳಿಗೆ 6 ವರ್ಷ ಜೈಲು ಶಿಕ್ಷೆ

Update: 2021-02-22 13:59 GMT

ಬೆಂಗಳೂರು, ಫೆ.22: ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳಿಗೆ ನಗರದ ಎನ್‍ಐಎ ವಿಶೆಷ ಕೋರ್ಟ್ 15 ಸಾವಿರ ರೂ.ದಂಡ ಹಾಗೂ 6 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಆರೋಪಿಗಳಾದ ಗಂಗಾಧರ್ ಖೋಲ್ಕರ್ ಹಾಗೂ ಸಬೀರುದ್ದೀನ್‍ಗೆ ಕೋರ್ಟ್ ಶಿಕ್ಷೆ ವಿಧಿಸಿ ಆದೇಶಿಸಿದೆ. 

ನಕಲಿ ನೋಟು ವಿರುದ್ಧ ಕಾರ್ಯಾಚರಣೆ ನಡೆಸಿದ್ದ ಎನ್‍ಐಎ ತಂಡ 2018ರಲ್ಲಿ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 2 ಸಾವಿರ ರೂ.ಮುಖಬೆಲೆಯ 6.84 ಲಕ್ಷ ನಕಲಿ ಹಣ ಜಪ್ತಿ ಮಾಡಿತ್ತು. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ವೇಳೆ ಪ.ಬಂಗಾಳದ ಮಾಲ್ಡಾ ಮೂಲದ ಆರೋಪಿಗಳು ಸೇರಿ ಮೊಹಮ್ಮದ್ ಸಜ್ಜಾದ್ ಅಲಿ, ಎಂ.ಜಿ.ರಾಜು, ಗಂಗಾಧರ್ ಖೋಲ್ಕರ್, ವನಿತಾ, ಅಬ್ದುಲ್ ಖಾದರ್, ಸಬೀರುದ್ದೀನ್ ಹಾಗೂ ವಿಜಯ್ ಹೀಗೆ ಒಟ್ಟು 7 ಜನರನ್ನು ಎನ್‍ಐಎ ಬಂಧಿಸಿ, ವಿಚಾರಣೆಗೊಳಪಡಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾಧರ್ ಖೋಲ್ಕರ್ ಹಾಗೂ ಸಬೀರುದ್ದೀನ್‍ಗೆ ಶಿಕ್ಷೆಯಾಗಿದ್ದು, ಇನ್ನುಳಿದ ಆರೋಪಿಗಳ ವಿರುದ್ಧ ಎನ್‍ಐಎ ತನಿಖೆಯನ್ನು ಮುಂದುವರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News