ಸರ್ದಾರ್‌ ಪಟೇಲ್‌ ಸ್ಟೇಡಿಯಂಗೆ ʼನರೇಂದ್ರ ಮೋದಿʼ ಹೆಸರು: ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ

Update: 2021-02-24 11:33 GMT

ಅಹ್ಮದಾಬಾದ್:‌ ಇಂದು ಗುಜರಾತ್‌ ನ ಅಹ್ಮದಾಬಾದ್‌ ನಲ್ಲಿರುವ ವಿಶ್ವದ ಅತೀದೊಡ್ಡ ಕ್ರಿಕೆಟ್‌ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ಹಿಂದೆ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ರ ಹೆಸರಿನಲ್ಲಿದ್ದ ಸ್ಟೇಡಿಯಂ ಅನ್ನು ಮರುನಾಮಕರಣಗೊಳಿಸಿದ್ದಕ್ಕಾಗಿ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. 

"1933 ನಲ್ಲಿ ಸ್ಟಟ್ಗಾರ್ಟ್‌ ನಲ್ಲಿದ್ದ ಸ್ಟೇಡಿಯಂಗೆ ಹಿಟ್ಲರ್‌ ತನ್ನದೇ ಹೆಸರಿಟ್ಟಿದ್ದ. ಆದರೆ ಮಹಾಯುದ್ಧದ ಬಳಿಕ ಆ ಹೆಸರನ್ನು ಬದಲಾಯಿಸಲಾಯಿತು. ನರೇಂದ್ರ ಮೋದಿ ಸರ್ದಾರ್‌ ಪಟೇಲ್‌ ರನ್ನು ಅವಮಾನಿಸಿದ್ದಾರೆ ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ. "ಸರ್ದಾರ್‌ ಪಟೇಲರು ಆರೆಸ್ಸೆಸ್‌ ಅನ್ನು ನಿಷೇಧಿಸಿದ್ದರಿಂದ ಅವರ ಮೇಲೆ ಈ ರೀತಿಯಾಗಿ ಸೇಡು ತೀರಿಸುತ್ತಿದ್ದಾರೆ." "ಎಲ್ಲವನ್ನೂ ಬದಲಾಯಿಸಿ ಮುಗಿಯಿತು. ಇನ್ನು ಸರ್ದಾರ್‌ ಪಟೇಲರ ಪ್ರತಿಮೆಗೆ ಮೋದಿಯ ಮುಖವನ್ನಿಟ್ಟುಡುವುದೊಂದೇ ಬಾಕಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

"ರಾಷ್ಟ್ರಪತಿ ಭವನದ ಅಧಿಕೃತ ಟ್ವಿಟರ್‌ ಹ್ಯಾಂಡಲ್‌ ಗೂ ನರೇಂದ್ರ ಮೋದಿಯ ಹೆಸರು ಮರುನಾಮಕರಣ ಮಾಡುವ ಕುರಿತು ತಿಳಿದಿರಲಿಲ್ಲ. ಅವರು ಮೊಟೇರಾ ಕ್ರಿಕೆಟ್‌ ಸ್ಟೇಡಿಯಂ ಎಂದೇ ಟ್ವೀಟ್‌ ಮಾಡಿದ್ದಾರೆ. ಹೊಸ ಹೆಸರಿನ ಬಗ್ಗೆ ಕೊನೆಯ ಕ್ಷಣದವರೆಗೂ ರಾಷ್ಟ್ರಪತಿಗೆ ತಿಳಿಸದೇ ಇರಲು ಕಾರಣವೇನು?" ಎಂದು ಆರ್ಟಿಐ ಕಾರ್ಯಕರ್ತ ಸಾಕೇತ್‌ ಗೋಖಲೆ ಪ್ರಶ್ನಸಿದ್ದಾರೆ.

ಇದು ಸರ್ದಾರ್‌ ಪಟೇಲರಿಗೆ ಮಾಡಿದ ಅನ್ಯಾಯ ಮತ್ತು ಅವಮಾನ ಎಂದು ಹಲವು ಮಂದಿ ಟ್ವೀಟಿಸಿದ್ದಾರೆ. "ನಾವು ಸರ್ದಾರ್‌ ಪಟೇಲ್‌ ಕಾಂಪ್ಲೆಕ್ಸ್‌ ಹೆಸರನ್ನು ಬದಲಾಯಿಸಿಲ್ಲ. ಮೊಟೇರಾ ಸ್ಟೇಡಿಯಂ ಎಂದಿದ್ದ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಿದ್ದೇವೆ. ಅಷ್ಟಕ್ಕೂ ಗಾಂಧಿ ನೆಹರು ಕುಟುಂಬದ ಹೆಸರಿನಲ್ಲಿ ಎಷ್ಟೆಲ್ಲಾ ಸ್ಟೇಡಿಯಂಗಳಿವೆ? ಎಂದು ಬಿಜೆಪಿ ಬೆಂಬಲಿಗರೋರ್ವರು ಟ್ವೀಟ್‌ ಮಾಡಿದ್ದಾರೆ. 

ಇನ್ನಷ್ಟು ಟ್ವೀಟ್‌ ಗಳು ಈ ಕೆಳಗಿನಂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News