ಕಾವೇರಿ, ಕೃಷ್ಣ ಜಲ ವಿವಾದ ಕುರಿತು ವಾದಿಸುತ್ತಿದ್ದ ಖ್ಯಾತ ವಕೀಲ ನಾರಿಮನ್ ಸೇವೆಯಿಂದ ನಿವೃತ್ತಿ

Update: 2021-02-25 12:42 GMT

ಬೆಂಗಳೂರು, ಫೆ.25: ಕಾವೇರಿ, ಕೃಷ್ಣ ಸೇರಿ ರಾಜ್ಯದ ಜಲ ವಿವಾದಗಳ ಕುರಿತು ಮೂರು ದಶಕಗಳ ಕಾಲ ಸುಪ್ರೀಂಕೋರ್ಟ್‍ನಲ್ಲಿ ಸಮರ್ಪಕವಾಗಿ ವಾದ ಮಂಡಿಸಿ ನ್ಯಾಯ ಒದಗಿಸುತ್ತಿದ್ದ ಖ್ಯಾತ ವಕೀಲ ಪಾಲಿ ನಾರಿಮನ್ ಸೇವೆಯಿಂದ ನಿವೃತ್ತರಾಗಿದ್ದಾರೆ.

ವಯಸ್ಸಾದ ಕಾರಣದಿಂದಾಗಿ ಇನ್ನು ನ್ಯಾಯಾಲಯಗಳಲ್ಲಿ ತಾವು ಕರ್ನಾಟಕ ಪರ ವಾದ ಮಂಡಿಸಲು ಸಾಧ್ಯವಾಗುತ್ತಿಲ್ಲ. ಜಲ ವಿವಾದಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬ ವಕೀಲರನ್ನು ನೇಮಿಸಿಕೊಳ್ಳಬೇಕೆಂದು ನಾರಿಮನ್ ಅವರು ರಾಜ್ಯ ಸರಕಾರಕ್ಕೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಇದೀಗ ಸರಕಾರ ಪಾಲಿ ನಾರಿಮನ್ ಅವರಂಥ ಸಮರ್ಥರನ್ನೇ ನೇಮಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಪಾಲಿ ನಾರಿಮನ್ ಅವರಿಗೆ ಈಗ 92 ವರ್ಷ ವಯಸ್ಸಾಗಿದೆ.

ತಮಿಳುನಾಡು ಸರಕಾರ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮುಂದಿಟ್ಟುಕೊಂಡು ಪದೇ ಪದೇ ಕ್ಯಾತೆ ತೆಗೆಯುತ್ತಿದ್ದ ವೇಳೆ ನ್ಯಾಯಾಲಯದಲ್ಲಿ ಅನೇಕ ಬಾರಿ ರಾಜ್ಯದ ಪರವಾಗಿ ವಾದ ಮಂಡಿಸಿದ್ದರು. 

ಕೃಷ್ಣ ಜಲವಿವಾದಕ್ಕಿಂತ ಹೆಚ್ಚಾಗಿ ಕಾವೇರಿ ನದಿ ನೀರು ವಿವಾದವನ್ನು ಸುಪ್ರೀಂಕೋರ್ಟ್ ತನಕ ಕೊಂಡೊಯ್ದು ರಾಜ್ಯಕ್ಕೆ ನ್ಯಾಯಕೊಡಿಸುವಲ್ಲಿ ಅವರ ಪರಿಶ್ರಮ ಅಪರಿಮಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News