ರಾಜ್ಯದಲ್ಲಿ 453 ಹೊಸ ಕೊರೋನ ಪ್ರಕರಣ ದೃಢ, 7 ಜನರ ಸಾವು

Update: 2021-02-25 16:12 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಫೆ.25: ರಾಜ್ಯದಲ್ಲಿ ಗುರುವಾರದಂದು 453 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 7 ಜನರು ಸೋಂಕಿಗೆ ಬಲಿಯಾಗಿದ್ದು, 947 ಜನರು ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಈಗಾಗಲೇ ಒಟ್ಟು ಸೋಂಕಿತರ ಸಂಖ್ಯೆ 9,49,636ಕ್ಕೆ ತಲುಪಿದ್ದು, 121 ಜನ ಸೋಂಕಿತರು ಐಸಿಯುನಲ್ಲಿದ್ದಾರೆ. 

ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 12,316 ಕ್ಕೆ ತಲುಪಿದೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 5,576 ಕ್ಕೆ ಏರಿಕೆಯಾಗಿದ್ದು, ಇವರೆಲ್ಲ ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ ಹಾಗೂ ಮನೆಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ.

ಏಳು ಸೋಂಕಿತರು ಬಲಿ: ಬೆಂಗಳೂರು 4, ಕಲಬುರಗಿ 1, ಮಂಡ್ಯ 1, ಉಡುಪಿ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಎಲ್ಲೆಲ್ಲಿ ಎಷ್ಟು: ರಾಜ್ಯದಲ್ಲಿ ಹೊಸದಾಗಿ 453 ಪ್ರಕರಣಗಳು ದೃಢವಾಗಿದ್ದು, ಅದರಲ್ಲಿ ಬಾಗಲಕೋಟೆ 3, ಬಳ್ಳಾರಿ 9, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 7,  ಬೆಂಗಳೂರು ನಗರ 271, ಚಿಕ್ಕಬಳ್ಳಾಪುರ 4,  ಚಿತ್ರದುರ್ಗ 4, ದಕ್ಷಿಣ ಕನ್ನಡ 24, ಧಾರವಾಡ 6, ಕಲಬುರಗಿ 12, ಕೋಲಾರ 2, ಮಂಡ್ಯ 4, ಮೈಸೂರು 27, ಶಿವಮೊಗ್ಗ 5, ತುಮಕೂರು 24, ಉಡುಪಿ 12, ವಿಜಯಪುರ ಜಿಲ್ಲೆಯಲ್ಲಿ 4 ಪ್ರಕರಣ ಪತ್ತೆಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News