×
Ad

ಕಾರಿನ ಪಂಕ್ಚರ್ ಆದ ಟಯರ್ ಸ್ವತಃ ಬದಲಿಸಿದ ಡಿಸಿ ರೋಹಿಣಿ ಸಿಂಧೂರಿ: ವೀಡಿಯೊ ವೈರಲ್

Update: 2021-02-26 15:09 IST

ಮೈಸೂರು, ಫೆ.26: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕಾರಿನ ಪಂಕ್ಚರ್ ಆದ ಟಯರ್ ಅನ್ನು ಸ್ವತಃ ಬದಲಾಯಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರೋಹಿಣಿ ಸಿಂಧೂರಿ ತಮ್ಮ ಕುಟುಂಬದ ಜೊತೆಗೆ ಹೊರಗಡೆ ಹೋಗಿದ್ದ ವೇಳೆ ಕಾರಿನ ಟಯರ್ ಪಂಕ್ಚರ್ ಆಗಿದೆ. ಈ ವೇಳೆ ಸ್ವತಃ ಅವರೇ ಕಾರಿನ ಟಯರ್ ಬದಲಾಯಿಸುತ್ತಿರುವ ದೃಶ್ಯವನ್ನು ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್ ಫೋನಿನಲ್ಲಿ ಸೆರೆ ಹಿಡಿದಿದ್ದಾರೆ.

ಈ ವೇಳೆ ನೀವು ‘ರೋಹಿಣಿ ಸಿಂಧೂರಿ ಅಲ್ವ’ ಎಂದು ಅವರು ಕೇಳಿದ್ದಕ್ಕೆ ತುಸು ನಕ್ಕು ರೋಹಿಣಿ ಸಿಂಧೂರಿ ಸುಮ್ಮನಾಗಿದ್ದಾರೆ. ಆದರೆ ಇದು ಎಲ್ಲಿ ಏನು ಎಂಬ ಬಗ್ಗೆ ಖಚಿತ ಮಾಹಿತಿ ದೊರಕಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News