ಮುರುಘಾ ಮಠದ ವಿರುದ್ಧ ವರದಿ, ಸ್ವಾಮೀಜಿಯ ಭಾವಚಿತ್ರ ಬಳಕೆ ಆರೋಪ: ಪತ್ರಕರ್ತನ ವಿರುದ್ಧ ಎಫ್‍ಐಆರ್

Update: 2021-02-26 13:58 GMT
ಮಹಂತೇಶ್- ಮುರುಘಾ ಶ್ರೀ (Photo: twitter.com/murughamatha)

ಬೆಂಗಳೂರು, ಫೆ. 26: ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶರಣರ ಭಾವಚಿತ್ರವನ್ನು ಸುದ್ದಿಯೊಂದಕ್ಕೆ ಬಳಕೆ ಮಾಡಿದ ಆರೋಪ ಹಿನ್ನೆಲೆ ಪತ್ರಕರ್ತ ಜಿ. ಮಹಂತೇಶ್ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರುಘಾ ಮಠದ ಅಧಿಕಾರಿಯ ವಿರುದ್ಧ ಮಹಿಳೆಯೊಬ್ಬರು ಎಫ್‍ಐಆರ್ ದಾಖಲಿಸಿದ್ದರು. ಈ ಸಂಬಂಧ ತನ್ನ ‘ದಿ ಫೈಲ್’ ವೆಬ್‍ಸೈಟ್‍ನಲ್ಲಿ ವರದಿ ಮಾಡಿದ ಮಹಂತೇಶ್, ಶ್ರೀಗಳ ಭಾವಚಿತ್ರವನ್ನು ಬಳಕೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಮಠದ ಬಿ.ಎಂ.ಜಗದೀಶ್ ನೀಡಿದ ದೂರನ್ನು ಆಧರಿಸಿ, ಮಹಂತೇಶ್ ವಿರುದ್ಧ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾವಚಿತ್ರ ಬಳಕೆ ಮಾಡಿದ್ದಕ್ಕೆ ಪತ್ರಕರ್ತನ ವಿರುದ್ಧ ಎಫ್‍ಐಆರ್ ದಾಖಲಿಸಿದ ಪೊಲೀಸರ ಕ್ರಮಕ್ಕೆ ಪತ್ರಕರ್ತರ ಸಂಘಟನೆಗಳು, ಕರ್ನಾಟಕ ರಾಷ್ಟ್ರ ಸಮಿತಿ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ಪತ್ರಕರ್ತರಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೂಡಲೇ  ಪತ್ರಕರ್ತನ ವಿರುದ್ಧದ ಎಫ್‍ಐಆರ್ ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರೆಸ್ ಕೌನ್ಸಿಲ್‍ಗೆ ದೂರು: ‘ಮುರುಘಾ ಮಠದ ವಿರುದ್ಧ ನಾನು ಮಾಡಿರುವ ವರದಿಗೆ ಪೂರಕ ದಾಖಲೆಗಳನ್ನು ಹೊಂದಿದ್ದೇನೆ. ಹೀಗಾಗಿ ಮಠದ ಈ ಕ್ರಮದ ವಿರುದ್ಧ ದಿಲ್ಲಿ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾಗೆ ಲಿಖಿತ ದೂರು ನೀಡಿದ್ದೇನೆ. ಪತ್ರಕರ್ತರ ಸಂಘಕ್ಕೂ ದೂರು ನೀಡುತ್ತೇನೆ' ಎಂದು ಪತ್ರಕರ್ತ ಮಹಂತೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪತ್ರಕರ್ತ ಜಿ.ಮಹಂತೇಶ್ ಅವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಕಳೆದ ಎರಡು ದಶಕಗಳಿಂದ ಮಹಂತೇಶ್ ಹಲವು ಪತ್ರಿಕೆ, ವಾಹಿನಿಗಳಲ್ಲಿ ಕೆಲಸ ಮಾಡಿದವರು....

Posted by Dinesh Kumar Dinoo on Thursday, 25 February 2021

ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಮಠಾಧೀಶರಾದ ಮಾನ್ಯ ಡಾ.ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಗಳಿಗೆ ಗೌರವಪೂರ್ವಕ ನಮಸ್ಕಾರಗಳು. ತಾವು...

Posted by Ravi Krishna Reddy on Thursday, 25 February 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News