ಶಿವಮೊಗ್ಗ: ಇಂಧನ ಬೆಲೆ ಏರಿಕೆ ತಗ್ಗಿಸುವಂತೆ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ

Update: 2021-02-26 18:20 GMT

ಶಿವಮೊಗ್ಗ,ಫೆ.26: ಡಿಸೇಲ್, ಪೆಟ್ರೋಲ್, ಅನಿಲ ಸಿಲಿಂಡರ್ ಬೆಲೆ ಏರಿಕೆ ತಗ್ಗಿಸುವಂತೆ ಆಗ್ರಹಿಸಿ ಪ್ರವಾಸಿ ಕಾರಿನ ಚಾಲಕರ ಸಂಘ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ.

ಡಿಸೇಲ್, ಪೆಟ್ರೋಲ್, ಅನಿಲ ಸಿಲಿಂಡರ್ ಬೆಲೆ ಏರಿಕೆಯಿಂದ ಸಾರ್ವಜನಿಕರಿಗೆ ಹಾಗೂ ಟ್ಯಾಕ್ಸಿ, ಬಸ್, ಲಾರಿ, ಆಟೋ ಚಾಲಕರಿಗೆ ಬಹಳ ತೊಂದರೆಯಾಗಿದೆ. ಕೊರೋನದಿಂದ ಜನ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಬೆಲೆ ಏರಿಕೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಬೆಲೆ ಏರಿಕೆಯಿಂದ ಸಾರ್ವಜನಿಕರು ವಾಹನಗಳಲ್ಲಿ ಸಂಚರಿಸಲು ಯೋಚನೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ಸಂಘ ದೂರಿದೆ.

ಈ ವಿಷಯವನ್ನು ಕೇಂದ್ರ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಈ ಕೂಡಲೇ ಬೆಲೆ ಏರಿಕೆ ತಗ್ಗಿಸುವಂತೆ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಬಿ.ಡಿ.ಗಣೇಶ್, ಕಾರ್ಯದರ್ಶಿ ಎನ್.ರಾಜು, ಖಜಾಂಚಿ ಸುಹಾಸ್ ಶೆಟ್ಟಿ, ಸಹ ಕಾರ್ಯದರ್ಶಿ ರಂಗನಾಥ್ ಮತ್ತು ಸದಸ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News