ಕೆ.ಆರ್.ಪೇಟೆ: ಆತಂಕ ಮೂಡಿಸಿದ್ದ ಚಿರತೆ ಗವಿಮಠದ ಬಳಿ ಸೆರೆ

Update: 2021-02-27 17:20 GMT

ಮಂಡ್ಯ, ಫೆ.27: ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗವಿಮಠದ ಗಜರಾಜಗಿರಿಯ ತಪ್ಪಲಿನಲ್ಲಿ ಸಾರ್ವಜನಿಕರಿಗೆ ಹಾಗೂ ಭಕ್ತಾಧಿಗಳಿಗೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆಯನ್ನು ಸೆರೆಯಿಡಿಯಲಾಗಿದೆ.

ಗಜರಾಜಗಿರಿಯ ತಪ್ಪಲಿನಲ್ಲಿ ಚಿರತೆ ಬಂಧಿಸಲು ಕೆ.ಆರ್.ಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಎಚ್.ಎಸ್.ಗಂಗಾಧರ್, ಸಹಾಯಕ ವಲಯ ಅರಣ್ಯಾಧಿಕಾರಿಗಳಾದ ರಾಘವೇಂದ್ರ ಮತ್ತು ಶ್ರೀಕಾಂತ್ ನೇತೃತ್ವದಲ್ಲಿ ಬೋನು ಇರಿಸಲಾಗಿತ್ತು.

ತಾಲೂಕಿನ ಮದ್ದಿಕ್ಯಾಚಮನಹಳ್ಳಿ, ತೆರ್ನೇನಹಳ್ಳಿ, ಬೊಮ್ಮೇನಹಳ್ಳಿ ಗ್ರಾಮಗಳಲ್ಲಿಯೂ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದ್ದು, ಬೋನಿಡುವಂತೆ ಈ ಗ್ರಾಮಗಳ ಗ್ರಾಮಸ್ಥರು ಅರಣ್ಯಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News