ರಾಷ್ಟ್ರದ ಅಭಿವೃದ್ಧಿ ಗೆ ಪತ್ರಿಕೋಧ್ಯಮದ ಪಾತ್ರ ಮಹತ್ತರ : ಗೋವಿಂದ ಕಾರಜೋಳ

Update: 2021-02-28 09:24 GMT

ಬಾಗಲಕೋಟೆ :  ರಾಷ್ಟ್ರ ಹಾಗೂ ರಾಜ್ಯದ ಅಭಿವೃದ್ಧಿಗೆ ಪತ್ರಿಕೋದ್ಯಮದ ಪಾತ್ರ ಮಹತ್ತರವಾದುದು ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು. 

ಕಾರ್ಯನಿರತ ಪತ್ರಕರ್ತರ ಸಂಘ, ಜಮಖಂಡಿ‌ ತಾಲೂಕು ಘಟಕವು ಏರ್ಪಡಿಸಿದ್ದ  ಜಮಖಂಡಿ ಉಪವಿಭಾಗ ಮಟ್ಟದ ಪತ್ರಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಪತ್ರಿಕೋದ್ಯಮವು ಸರ್ಕಾರದ ನಾಲ್ಕನೇ ಆಧಾರ ಸ್ಥಂಭ ವಾಗಿದ್ದು,   ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ನೆರವಾಗುತ್ತಿದೆ.    ರಾಜ್ಯದ ಅಭಿವೃದ್ಧಿ ಕುರಿತು  ಅನೇಕ ಸಮಸ್ಯೆಗಳನ್ನು  ಪತ್ರಿಕೋದ್ಯಮವು ಸರ್ಕಾರದ ಗಮನ ಸೆಳೆಯುತ್ತದೆ. ಮಹಾತ್ಮಗಾಂಧಿಜಿ, ಡಿವಿ ಗುಂಡಪ್ಪ,  ಮೊಹರೆ ಹನುಮಂತರಾಯ ರಂತಹ ಅನೇಕ  ದಿಗ್ಗಜರು ಪತ್ರಿಕೋದ್ಯಮಕ್ಕೆ ಅಪರಿಮಿತವಾದ ಕೊಡುಗೆ ನೀಡಿದ್ದಾರೆ ಎಂದರು.

ಸಮಾರಂಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಮುರುಗೇಶ್ ನಿರಾಣಿ, ಶಾಸಕರಾದ ಸಿದ್ದು ಸವದಿ,  ಆನಂದ ಸಿದ್ದು ನ್ಯಾಮಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಈಶ್ವರ್ ಶೆಟ್ಟರ್,  ಜಿಲ್ಲಾಧ್ಯಕ್ಷ  ಸುಭಾಶ್ ಹೊದ್ಲೂರು, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತರಾದ ರಾಮಮನಗೂಳಿ, ಮುತ್ತು ನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಓಲೇಮಠದ ಡಾ. ಚನ್ನಬಸವ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News