ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾರ್ಕೆಟಿಂಗ್ ವುಮೆನ್: ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯ

Update: 2021-02-28 12:36 GMT

ಬೆಂಗಳೂರು, ಫೆ. 28: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ‘ಮಾರ್ಕೆಟಿಂಗ್ ವುಮೆನ್' ಎಂದು ಸಚಿವ ರಮೇಶ್ ಜಾರಕಿಹೊಳಿ ವ್ಯಂಗ್ಯವಾಡಿದ್ದಾರೆ.

ರವಿವಾರ ಗೋಕಾಕ್ ತಾಲೂಕಿನ ಜಮನಾಳ ಗ್ರಾಮದಲ್ಲಿ ‘ರಮೇಶ್ ಜಾರಕಿಹೊಳಿ ಮಂತ್ರಿ ಮಾಡಿದ್ದು ನಾನೇ' ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಿತೈಷಿಗಳು ಆಕೆ ಬಗ್ಗೆ ಮಾತನಾಡದಂತೆ ನನಗೆ ತಿಳಿ ಹೇಳಿದ್ದಾರೆ. ಹೀಗಾಗಿ, ಹೆಬ್ಬಾಳ್ಕರ್ ಮಾತಿಗೆ ಪದೇ ಪದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಆದರೆ, ಒಂದಂತು ನಿಜ ಲಕ್ಷ್ಮೀ ಅವರು ಮಾರ್ಕೆಟಿಂಗ್ ವುಮೆನ್ ಎಂದು ವ್ಯಂಗ್ಯವಾಡಿದರು.

ನನ್ನನ್ನು ಯಾರು ಮಂತ್ರಿ ಮಾಡಿದರು ಎಂಬ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಕೇಳಿ ತಿಳಿದುಕೊಳ್ಳಲಿ ಎಂದು ತೀರುಗೇಟು ನೀಡಿದರು.

ಗೋಕಾಕ್ ಕ್ಷೇತ್ರಕ್ಕೆ ಯಾರು ಬಂದರೂ ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಗೋಕಾಕ್‍ನಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಮಾತನಾದ್ದು, ಹೀಗಾಗಿ ಯಾರು ಬಂದರೂ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ ಎಂದರು.

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆ ಯಶಸ್ವಿ ಆಗಿದೆ ಎನ್ನುವುದಕ್ಕಿಂತ ತಾಂತ್ರಿಕ ಹಾಗೂ ಕಾನೂನು ಅಧಿಕಾರಿಗಳು ಸೇರಿ ಕಾರ್ಯನಿರ್ವಹಿಸಬೇಕೆಂಬ ಉದ್ದೇಶದಿಂದ ಸಭೆ ನಡೆಸಿ ಮಾಹಿತಿ ನೀಡಿ, ಯೋಜನೆ ನಮ್ಮ ಪರವಾಗುವಂತೆ ಕೆಲಸ ಮಾಡಲಾಗುತ್ತಿದೆ ಎಂದರು.

ಗೋವಾದಿಂದ ಸುಳ್ಳು ಪ್ರಮಾಣ ಪತ್ರ ಸಲ್ಲಿಕೆ: ‘ಮೂರು ರಾಜ್ಯಗಳ ಜಂಟಿ ರಚನೆ ಮಾಡಿಲ್ಲ. ಗೋವಾ ರಾಜ್ಯದವರು ಸುಳ್ಳು ಪ್ರಮಾಣ ಪತ್ರ ಮಾಡಿದ್ದರಿಂದ ಕೋರ್ಟ್ ವರದಿ ಕೇಳಿದೆ. ಆದರೆ, ಯಾವುದೇ ಕಾರಣಕ್ಕೂ ನಾವು ಕಾನೂನು ಉಲ್ಲಂಘನೆ ಮಾಡಲು ಸಾಧ್ಯವಿಲ್ಲ. ಗೋವಾ ರಾಜ್ಯ ಕೋರ್ಟ್ ನಲ್ಲಿ ಮತ್ತೊಮ್ಮೆ ಮುಖಭಂಗ ಅನುಭವಿಸಲಿದೆ' ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News