ಒಂದು ರೂ. ಗೌರವಧನ ಸಾಕು: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮದನ್ ಗೋಪಾಲ್
Update: 2021-03-01 17:51 IST
ಬೆಂಗಳೂರು, ಮಾ. 1: ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ನೂತನ ಅಧ್ಯಕ್ಷರಾಗಿ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ್ ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಈ ಹುದ್ದೆಯನ್ನು ಅಲಂಕರಿಸಿದರೂ ಅವರು ಸರಕಾರದಿಂದ ಯಾವುದೇ ವೇತನ ಮತ್ತು ಭತ್ತೆ ಪಡೆಯುವುದಿಲ್ಲ ಎಂದು ರಾಜ್ಯ ಸರಕಾರಕ್ಕೆ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.
ಪತ್ರದಲ್ಲಿ ‘ಈ ಹುದ್ದೆಗೆ ಸಂಬಂಧಿಸಿದಂತೆ ನಾನು ಯಾವುದೇ ವೇತನ, ಇತರೆ ಭತ್ತೆಗಳನ್ನು ಪಡೆಯಲು ಇಚ್ಛಿಸುವುದಿಲ್ಲ. ರಾಜ್ಯ ಸರಕಾರದಿಂದ ಗೌರವ ಧನವಾಗಿ ಒಂದು ರೂಪಾಯಿಯನ್ನು ಮಾತ್ರ ಪಡೆಯಲು ಇಚ್ಛಿಸಿದ್ದೇನೆ' ಎಂದು ಮದನ್ ಗೋಪಾಲ್ ಅವರು ರಾಜ್ಯ ಸರಕಾರಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.