ಸಿಸಿಬಿಗೆ ಚಾರ್ಜ್ ಶೀಟ್ ಸಲ್ಲಿಸುವ ಅಧಿಕಾರ ನೀಡಿದ ರಾಜ್ಯ ಸರಕಾರ

Update: 2021-03-01 15:42 GMT

ಬೆಂಗಳೂರು, ಮಾ.1: ಪ್ರಮುಖ ತನಿಖಾ ಸಂಸ್ಥೆಯಾಗಿರುವ ಸಿಸಿಬಿಗೆ ರಾಜ್ಯ ಸರಕಾರವು ಚಾರ್ಜ್ ಶೀಟ್ ಸಲ್ಲಿಸುವ ಪ್ರಕ್ರಿಯೆಯ ಅಧಿಕಾರ ನೀಡಿದೆ.

ಚಾರ್ಜ್‍ಶೀಟ್ ಸಲ್ಲಿಕೆಗೆ ಅವಕಾಶ ಇಲ್ಲ ಎನ್ನುವ ರಾಜ್ಯ ಸರಕಾರದ ಆದೇಶವನ್ನು ಪ್ರಶ್ನಿಸಿ ಸಿಸಿಬಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೆ, ಈ ನಡುವೆ ಚಾರ್ಜ್ ಶೀಟ್ ಸಲ್ಲಿಸುವ ಅಧಿಕಾರ ನೀಡಿ ರಾಜ್ಯ ಸರಕಾರ ಆದೇಶಿಸಿದೆ ಎಂದು ವರದಿಯಾಗಿದೆ.

ಸರಕಾರದ ಆದೇಶದಿಂದ ಸಿಐಡಿಗೆ ಇರುವ ಎಲ್ಲ ಅಧಿಕಾರ ಇನ್ನು ಮುಂದೆ ಸಿಸಿಬಿಗೂ ಇದ್ದು, ಗಂಭೀರ ಅಪರಾಧ ಪ್ರಕರಣಗಳ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲು ಸಹಕಾರಿ ಎಂದು ಸಿಸಿಬಿ ಅಧಿಕಾರಿಯೊಬ್ಬರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News