​ಕೊರೋನ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಈ ಬಾರಿಯ ಹಜ್‌ ಯಾತ್ರೆಗೆ ಅವಕಾಶ: ಸೌದಿ ಅರೇಬಿಯಾ

Update: 2021-03-03 16:21 GMT

ರಿಯಾದ್ (ಸೌದಿ ಅರೇಬಿಯ), ಮಾ. 3: ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಲಸಿಕೆ ಹಾಕಿಕೊಂಡವರಿಗೆ ಮಾತ್ರ ಈ ಬಾರಿಯ ಹಜ್ ಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ ಎಂದು ಸೌದಿ ಅರೇಬಿಯ ಘೋಷಿಸಿದೆ.

ಹಜ್ ಯಾತ್ರೆಗಾಗಿ ಸೌದಿ ಅರೇಬಿಯಕ್ಕೆ ಬರುವ ಪರವಾನಿಗೆ ಪಡೆಯಲು ಕೊರೋನ ವೈರಸ್ ಲಸಿಕೆ ಪಡೆದಿರುವುದು ಪ್ರಮುಖ ಶರತ್ತಾಗಿರುತ್ತದೆ ಎಂದು ಸೌದಿ ಅರೇಬಿಯದ ‘ಓಕಝ್’ ಪತ್ರಿಕೆ ವರದಿ ಮಾಡಿದೆ.

2020ರಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ಕೇವಲ ಸುಮಾರು 1,000 ಜನರಿಗೆ ಹಜ್ ಯಾತ್ರೆಯಲ್ಲಿ ಭಗವಹಿಸಿಲು ಅವಕಾಶ ನೀಡಲಾಗಿತ್ತು. ಆಧುನಿಕ ಇತಿಹಾಸದಲ್ಲಿ ಮೊದಲ ಬಾರಿಗೆ, ವಿದೇಶಗಳ ಮುಸ್ಲಿಮರಿಗೆ ಯಾತ್ರೆಯಲ್ಲಿ ಭಗವಹಿಸಲು ಅವಕಾಶ ನೀಡಲಾಗಿರಲಿಲ್ಲ.

ಹಜ್ ಯಾತ್ರೆಗಾಗಿ ಈ ವರ್ಷ ವಿಧಿಸಲಾಗಿರುವ ಇತರ ಶರತ್ತುಗಳು
*ಹಜ್ ನಲ್ಲಿ ಭಾಗವಹಿಸುವವರ ವಯೋಮಿತಿ 18-65 ವರ್ಷಗಳು.
*ಮಕ್ಕಾ ಮತ್ತು ಮದೀನಾಗಳಿಗೆ ಹೋಗುವ ಯಾತ್ರಿಕರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಬೇಕು.
*ಹೃದಯದ ಕಾಯಿಲೆಗಳು, ಮಧುಮೇಹ ಮತತು ಉಸಿರಾಟದ ಸಮಸ್ಯೆಗಳನ್ನು ಹೊಂದಿದವರಿಗೆ ಹಾಗೂ ಗರ್ಭೀಣಿಯರಿಗೆ ಹಾಗೂ ಇತರ ಗಂಭೀರ ಕಾಯಿಲೆಗಳನ್ನು ಹೊಂದಿದವರಿಗೆ ಈ ಬಾರಿಯ ಹಜ್ನಲ್ಲಿ ಭಾಗವಹಿಸಲು ಅವಕಾಶವಿಲ್ಲ. ಯಾತ್ರಿಗಳು ಆರೋಗ್ಯವಂತರಾಗಿರಬೇಕು.
*ಭಾರತೀಯ ಹಜ್ ಸಮಿತಿಯ ಮೂಲಕ ಈಗಾಗಲೇ ಒಮ್ಮೆ ಹಜ್ಗೆ ಹೋಗಿರುವವರು, ಈ ಬಾರಿಯ ಯಾತ್ರೆಗೆ ಅರ್ಹರಾಗಿರುವುದಿಲ್ಲ ಆದರೆ ಸಹಪ್ರಯಾಣಿಕರಿಲ್ಲದ ಮಹಿಳೆಯರೊಂದಿಗೆ ಮಹ್ರಮ್‌ ಆಗಿ ತೆರಳಬಹುದಾಗಿದೆ ಎಂದು ಭಾರತೀಯ ಹಜ್ ಸಮಿತಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News