ನ್ಯೂಝಿಲ್ಯಾಂಡ್: 7.3ರಷ್ಟು ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

Update: 2021-03-04 14:55 GMT

ಕ್ರೈಸ್ಟ್ ಚರ್ಚ್: ನ್ಯೂಝಿಲ್ಯಾಂಡ್ ನ ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ರಿಕ್ಟರ್ ಮಾಪಕದಲ್ಲಿ 7.3ರಷ್ಟು ತೀವ್ರತೆಯಿರುವ ಭೂಕಂಪನ ಸಂಭವಿಸಿದ್ದು, ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಪಸಿಫಿಕ್ ಸುನಾಮಿ ವಾರ್ನಿಂಗ್ ಸೆಂಟರ್ (ಪಿಟಿಡಬ್ಲುಸಿ)ತಿಳಿಸಿದೆ.

ಅಮೆರಿಕದ ಭೂ ವೈಜ್ಞಾನಿಕ ಸಮೀಕ್ಷೆಯು ಆರಂಭದಲ್ಲಿ ಭೂಕಂಪನವನ್ನು 7.3ಕ್ಕೆ ಏರಿಸಿತು. ನಂತರ ಅದನ್ನು 6.9ಕ್ಕೆ ಪರಿಷ್ಕರಿಸಿತು. ಭೂಕಂಪನವು 10 ಕಿ.ಮೀ. ಆಳದಲ್ಲಿ(6 ಮೈಲುಗಳು)ಸಂಭವಿಸಿದೆ ಎಂದು ಅದು ತಿಳಿಸಿದೆ.

ಭೂಕಂಪದ ಕೇಂದ್ರ ಬಿಂದುವಿನಿಂದ 300 ಕಿ.ಮೀ.ವ್ಯಾಪ್ತಿಯಲ್ಲಿ ಸುನಾಮಿ ಅಲೆಗಳು ಏಳುವ ಸಾಧ್ಯತೆ ಇದೆ ಎಂದು ಪಿಟಿಡಬ್ಲುಸಿ  ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News