ಕೊಳ್ಳೇಗಾಲ: ಅಕ್ರಮವಾಗಿ ನಾಡಬಂದೂಕನ್ನೂ ಬಳಸುತ್ತಿದ್ದ ಐವರ ಬಂಧನ

Update: 2021-03-04 17:08 GMT

ಕೊಳ್ಳೇಗಾಲ: ಎರಡು ಪ್ರಕರಣದಡಿ ಅಕ್ರಮವಾಗಿ ನಾಡಬಂದೂಕನ್ನೂ ಬಳಸುತ್ತಿದ್ದ ಐವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ತಾಲ್ಲೂಕಿನ ಮೇಗಲದೊಡ್ಡಿ ಜೋಸೇಫ್, ಕಿರೇಪಾತಿ ಗ್ರಾಮದ ನಲ್ಲಸ್ವಾಮಿ, ಸುಂಡ್ರಳ್ಳಿಯ ವೆಂಕಟಪ್ಪ, ಜಾಗೇರಿ ಶಿಲುವೈಪುರದ ಮಹಿಮ ಅಂಥೋಣಿ ರಾಜ್ ಹಾಗೂ ಕರಾಚಿಕಟ್ಟೆ ತೋಮಸ್ ಬಂಧಿಸಿದ್ದಾರೆ. ಇವರಿಂದ ಎರಡು ನಾಡಬಂದೂಕು ಹಾಗೂ ಅದರ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ನಾಲ್ಕು ದಿನಗಳಿ ಹಿಂದೆ ಅರಣ್ಯ ಸಂಚಾರಿ ದಳದ ಪೊಲೀಸರು ಜೋಸೇಫ್ ಎಂಬಾತನನ್ನು ಬಂಧಿಸಿ ಆತನಿಂದ ಸಿಡಿಮದ್ದು, ಕೇಪುಗಳನ್ನು ವಶಪಡಿಸಿಕೊಂಡು ಗ್ರಾಮಾಂತರ ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದರು. 

ತನಿಖೆ ಮುಂದುವರೆಸಿದ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಅಶೋಕ್ ರವರು ಬಂಧಿತ ಆರೋಪಿ ಜೋಸೇಫ್ ವಿಚಾರಕ್ಕೆ ಒಳಪಡಿಸಿ ಸ್ಪೋಟಕಗಳನ್ನು ನೀಡಿದ್ದ ನಲ್ಲಸ್ವಾಮಿ, ಬಂದೂಕು ಬಳಸುತ್ತಿದ್ದ ಸುಂಡ್ರಳ್ಳಿ ವೆಂಕಟಪ್ಪ, ಮಹಿಮ ಅಂಥೋಣಿ ರಾಜ್ ರವರುಗಳ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಮುಂದೆ ಹಾಜರುಪಡಿಸಿದ್ದಾರೆ.

ಮತ್ತೊಂದು ಪ್ರಕರಣ: ಇಂದು ಸತ್ತೇಗಾಲ ಜಾಗೇರಿ ಒಂಟೇತ್ತಿನಗುಡ್ಡ ಅರಣ್ಯ ಪ್ರದೇಶದಲ್ಲಿ ಮತ್ತೊಬ್ಬ ಆರೋಪಿ ಕರಾಚಿ ಕಟ್ಟೆ ನಿವಾಸಿ ತೋಮಸ್ ಎಂಬಾತನನ್ನು ನಾಡಬಂದೂಕು ಹಾಗೂ ಅದರ ಪರಿಕರ ಸಮೇತ ಸಿಪಿಐ ಶ್ರೀಕಾಂತ್ ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.

ಪೊಲೀಸರ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಸಾರಾಥಾಮಸ್ ರವರು ಪ್ರಶಂಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News