ಮಾ.8ರಂದು ಮಹಿಳಾ ದಿನಾಚರಣೆ: ಪ್ರವಾಸಿ ಪ್ಯಾಕೇಜ್‍ಗಳಲ್ಲಿ ಮಹಿಳಾ ಪ್ರವಾಸಿಗರಿಗೆ ಶೇ.50ರಷ್ಟು ರಿಯಾಯಿತಿ

Update: 2021-03-05 15:16 GMT

ಬೆಂಗಳೂರು, ಮಾ. 5: ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ(ಮಾ.8) ಅಂಗವಾಗಿ ಮಹಿಳಾ ಪ್ರವಾಸಿಗರನ್ನು ಉತ್ತೇಜಿಸುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಪ್ರವಾಸಿ ಪ್ಯಾಕೇಜ್‍ಗಳಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಪ್ರಕಟಿಸಿದೆ.

ಮಾ.8ರಂದು ಆಯೋಜನೆಯಾಗುವ ಪ್ರವಾಸಿ ಪ್ಯಾಕೇಜ್‍ಗಳಲ್ಲಿ ತೆರಳಲಿರುವ ಮಹಿಳಾ ಪ್ರವಾಸಿಗರಿಗೆ ಪ್ಯಾಕೇಜ್ ಟೂರ್ ಹಾಗೂ ಮಯೂರ ಹೋಟೆಲಿನಲ್ಲಿ ಪಡೆಯುವ ವಾಸ್ತವ್ಯ ಸೌಲಭ್ಯಗಳಿಗೆ ಕೊಠಡಿಗಳ ದರದಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ನೀಡಲಾಗುವುದೆಂದು ಹಾಗೂ ಮಾರ್ಚ್ ತಿಂಗಳಲ್ಲಿ ತೆರಳುವ ಮಹಿಳಾ ಪ್ರವಾಸಿಗರಿಗೆ ಶೇ.10ರಷ್ಟು ರಿಯಾಯಿತಿಯನ್ನು ನೀಡುವುದಾಗಿ ನಿಗಮದ ಅಧ್ಯಕ್ಷೆ ಶ್ರುತಿ ಕೃಷ್ಣ ತಿಳಿಸಿದ್ದಾರೆ.

ಮಹಿಳೆಯರನ್ನು ಪ್ರವಾಸಿ ಚಟುವಟಿಕೆಗಳತ್ತ ಹೆಚ್ಚಾಗಿ ಆಕರ್ಷಿಸಲು ನಿಗಮದ ವತಿಯಿಂದ ಧಾರ್ಮಿಕ, ನೈಸರ್ಗಿಕ, ಪಾರಂಪರಿಕ ಹಾಗೂ ಕಡಲತೀರ ಪ್ರವಾಸಗಳನ್ನು ಆಚರಣೆ ಮಾಡಲಾಗುತ್ತಿದ್ದು, ಎಲ್ಲ ಪ್ರವಾಸಗಳಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗುವ ಪ್ರವಾಸಗಳಿಗೆ ಮುಂಗಡವಾಗಿ ಟಿಕೇಟ್ ಕಾಯ್ದಿರಿಸುವ ಒಬ್ಬ ಮಹಿಳಾ ಪ್ರವಾಸಿಗರಿಗೆ ಶೇ.50ರಷ್ಟು ರಿಯಾಯಿತಿ ಹಾಗೂ ಮಾರ್ಚ್ ನಲ್ಲಿ ತೆರಳುವ ಮಹಿಳಾ ಪ್ರವಾಸಿಗರಿಗೆ ಒಟ್ಟಾರೆ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡುವ ಮೂಲಕ ವಿಶೇಷ ಕೊಡುಗೆ ನೀಡಲಾಗಿದೆ.

ಆದುದರಿಂದ, ಮಹಿಳಾ ಪ್ರವಾಸಿಗರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ. ನಿಗಮದಿಂದ ಆಯೋಜಿಸಲಾಗುವ ವ್ಯವಸ್ಥಿತ ಪ್ರವಾಸಗಳು ಹಾಗೂ ಮಯೂರ ಹೋಟೆಲ್ ವಿವರಗಳಿಗೆ ನಿಗಮದ ಜಾಲತಾಣ www.kstdc.co ಭೇಟಿ ನೀಡಲು ಹಾಗೂ ದೂ.ಸಂಖ್ಯೆ 080-43344334/8970650070 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News