ಎಸೆಸೆಲ್ಸಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ: ಒಂದು ಅಂಕದ ಬಹು ಆಯ್ಕೆ ಪ್ರಶ್ನೆಗಳು 30ಕ್ಕೆ ಹೆಚ್ಚಳ

Update: 2021-03-06 13:41 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.6: ಕೋವಿಡ್-19 ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷಾ ಪ್ರಶ್ನೆಪತ್ರಿಕೆ ಮಾದರಿಯಲ್ಲಿ ಸಣ್ಣಮಟ್ಟದ ಬದಲಾವಣೆ ಮಾಡಿದ್ದು, ಈ ಹಿಂದೆ ಕೇಳಲಾಗುತ್ತಿದ್ದ ಒಂದು ಅಂಕದ ಬಹು ಉತ್ತರ (ಮಲ್ಟಿಪಲ್ ಚಾಯ್ಸ್) ಆಯ್ಕೆ ಪ್ರಶ್ನೆಗಳನ್ನು 20ರಿಂದ 30 ಅಂಕಕ್ಕೆ ಹೆಚ್ಚಳ ಮಾಡಲಾಗಿದೆ.

ಕೋವಿಡ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಹಿತದೃಷ್ಟಿಯಿಂದ ತಲಾ ಒಂದು ಅಂಕದ ಪ್ರಶ್ನೆಗಳನ್ನು ಹೆಚ್ಚಳ ಮಾಡಲಾಗಿದೆ. ಇದರಿಂದ 2, 3 ಹಾಗೂ 5 ಅಂಕದ ಪಶ್ನೆಗಳಲ್ಲಿ ಒಂದೆರಡು ಪ್ರಶ್ನೆಗಳು ಕಡಿಮೆಯಾಗಲಿದೆ. ಉಳಿದೆಲ್ಲವೂ ಹಿಂದಿನ ಪ್ರಶ್ನೆ ಪತ್ರಿಕೆ ಮಾದರಿಯಲ್ಲಿಯೇ ಇರಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News