ಗೃಹಿಣಿ ಆತ್ಮಹತ್ಯೆ: ಮೂರು ದಿನದ ನಂತರ ಅಂತ್ಯಸಂಸ್ಕಾರ

Update: 2021-03-06 18:03 GMT

ಮಂಡ್ಯ, ಮಾ.6: ಮೂರು ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಮದ್ದೂರು ತಾಲೂಕು ಯರಗನಹಳ್ಳಿ ಗ್ರಾಮದ ಕಿರಣ್‍ಕುಮಾರ್ ಪತ್ನಿ ಎಸ್.ಬಿ.ಮೇಘ ಅವರ ಶವಸಂಸ್ಕಾರ ಆಕೆಯ ತವರು ಸಾದೊಳಲು ಗ್ರಾಮದಲ್ಲಿ ಶನಿವಾರ ನೆರವೇರಿತು.

ರಾಮನಗರ ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮೇಘ ಮೂರು ದಿನದ ಹಿಂದೆ ಯರಗನಹಳ್ಳಿಯ ಪತಿ ಕಿರಣ್‍ಕುಮಾರ್ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತಿ ಮತ್ತು ಆತನ ಮನೆಯವರ ಹಲ್ಲೆ, ಕಿರುಕುಳವೇ ಮೇಘಳ ಆತ್ಮಹತ್ಯೆಗೆ ಕಾರಣವೆಂದು ಆರೋಪಿಸಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.

ಕಿರಣ್‍ಕುಮಾರ್ ಮತ್ತು ಆತನ ಕುಟುಂಬದವರನ್ನು ಬಂಧಿಸಬೇಕು. ಗಂಡನ ಆಸ್ತಿಯನ್ನು ಮಗುವಿನ ಹೆಸರಿಗೆ ಬರೆದುಕೊಡಬೇಕು. ತಾಯಿಯ ಚಿನ್ನಾಭರಣಗಳನ್ನು ನೀಡಬೇಕು. ಅಲ್ಲಿವರೆಗೆ ಶವಸಂಸ್ಕಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಮೇಘ ಪೋಷಕರು ಪಟ್ಟುಹಿಡಿದ್ದರು.

ನ್ಯಾಯ ಪಂಚಾಯತಿ ನಡೆದು ಕಿರಣ್‍ಕುಮಾರ್ ಕುಟುಂಬದ 8 ಎಕರೆ ಜಮೀನು ಮತ್ತು ನಿವೇಶನವನ್ನು ಮೇಘಳ ಪುತ್ರನ ಹೆಸರಿಗೆ ಬರೆದುಕೊಟ್ಟು ಮದುವೆ ಸಂದರ್ಭ ನೀಡಿದ್ದ ಚಿನ್ನಾಭರಣ ಹಿಂತಿರುಗಿಸಲಾಯಿತು. ನಂತರ, ತಹಶೀಲ್ದಾರ್ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಲಾಯಿತು.  ಆಕೆಯ ತವರು ಸಾದೊಳಲು ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿತು.

ಕಿರಣ್‍ಕುಮಾರ್ ವಿರುದ್ಧ ಕೆಸ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News