ಬಜೆಟ್‌ ಮಂಡಿಸಲಿರುವ ಮುಖ್ಯಮಂತ್ರಿ ಯಡಿಯೂರಪ್ಪ: ಆಯವ್ಯಯ ಪಟ್ಟಿಯ ಮೇಲೆ ಜನತೆಯ ದೃಷ್ಟಿ

Update: 2021-03-08 06:41 GMT

ಬೆಂಗಳೂರು, ಮಾ.8: ಕೊರೋನ ಸಂಕಷ್ಟದಿಂದಾಗಿ ಸಂಪನ್ಮೂಲ ಕ್ರೋಢೀಕರಣದಲ್ಲಿ ಖೋತಾ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯ ನಡುವೆ ಇಂದು (ಮಾ.8) ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂಡಿಸಲಿರುವ 2021-22ನೆ ಸಾಲಿನ ಆಯವ್ಯಯದ ಮೇಲೆ ರಾಜ್ಯದ ಜನತೆಯ ದೃಷ್ಟಿನೆಟ್ಟಿದೆ.

ಮಧ್ಯಾಹ್ನ 11:30ಕ್ಕೆ ಆಯವ್ಯಯ ಅನುಮೋದಿಸಲು ವಿಶೇಷ ಸಂಪುಟ ಸಭೆ ನಡೆಸಲಿರುವ ಸಿಎಂ ಯಡಿಯೂರಪ್ಪ, 12 ಗಂಟೆಗೆ ವಿಧಾನಸಭೆಯಲ್ಲಿ 2021-22ನೆ ಸಾಲಿನ ಬಜೆಟ್ ಮಂಡಿಸದ್ದಾರೆ. ಎಂಟನೆ ಬಾರಿಗೆ ಬಜೆಟ್ ಮಂಡಿಸಲು ಸಜ್ಜಾಗಿರುವ ಯಡಿಯೂರಪ್ಪನವರು ಸಾಮಾನ್ಯ ಜನರಿಗೆ ಹೊರೆಯಾಗದ ಬಜೆಟ್ ಮಂಡಿಸಲಿದ್ದಾರೆಂದು ಹೇಳಲಾಗುತ್ತಿದೆ.

ಇಂದು ಅಧಿವೇಶನದಲ್ಲಿ 2021-22ನೇ ಸಾಲಿನ ಆಯವ್ಯಯ ಪತ್ರ ಮಂಡಿಸಲಿದ್ದೇನೆ. ಮುಂಜಾನೆ ಎಂದಿನಂತೆ ದೇವರಿಗೆ ಪೂಜೆ ಸಲ್ಲಿಸಿ, ಬಜೆಟ್ ಮಂಡನೆ ಹಿನ್ನಲೆಯಲ್ಲಿ ಆಶೀರ್ವಾದವನ್ನು ಕೋರಿ, ರಾಜ್ಯದ ಸಮಸ್ತ ಜನತೆಯ ಏಳಿಗೆಗಾಗಿ ಪ್ರಾರ್ಥಿಸಲಾಯಿತು. ಮಹಿಳಾ ದಿನಾಚರಣೆ ಅಂಗವಾಗಿ ಹಲವು ಮಹಿಳಾ ಪ್ರಮುಖರು ಶುಭ ಕೋರಿದರು.

-ಮುಖ್ಯಮಂತ್ರಿ ಯಡಿಯೂರಪ್ಪ ( ಟ್ವೀಟ್)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News