ರಾಜ್ಯ ಬಜೆಟ್ 2021: ಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ

Update: 2021-03-08 17:12 GMT

ಬೆಂಗಳೂರು, ಮಾ.8: ಪೆಟ್ರೋಲ್ ಮತ್ತು ಡೀಸಲ್‍ಗಳ ಮೇಲೆ ವಿಧಿಸುವ ಕರ್ನಾಟಕ ಮಾರಾಟ ತೆರಿಗೆ (KST) ಸೇರಿದಂತೆ ಯಾವುದೇ ತೆರಿಗೆಯನ್ನು 2021-22ನೆ ಸಾಲಿನಲ್ಲಿ ಹೆಚ್ಚಿಸದಿರಲು ತೀರ್ಮಾನ ಕೈಗೊಳ್ಳಲಾಗಿದೆ.

ವಾಣಿಜ್ಯ ತೆರಿಗೆಗಳು; ಸರಕು ಮತ್ತು ಸೇವಾ ತೆರಿಗೆ: ಜಿ.ಎಸ್.ಟಿ. ಪೂರ್ವದ ಲೆಕ್ಕಪರಿಶೋಧನೆಗಳನ್ನು ಪೂರ್ಣಗೊಳಿಸುವ ಹಾಗೂ ತೆರಿಗೆ ಬಾಕಿಯನ್ನು ತ್ವರಿತ ಗತಿಯಲ್ಲಿ ವಸೂಲು ಮಾಡಲು, ಜಿ.ಎಸ್.ಟಿ. ಪೂರ್ವದ ಕಾಯ್ದೆಗಳಿಗೆ ಸಂಬಂಧಿಸಿದಂತೆ ‘ಕರ ಸಮಾಧಾನ ಯೋಜನೆ-2021’ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, 2021-22ನೇ ಸಾಲಿಗೆ ವಾಣಿಜ್ಯ ತೆರಿಗೆಗಳ ಇಲಾಖೆಗೆ 76,473 ಕೋಟಿ ರೂ.ಗಳ ತೆರಿಗೆ ಸಂಗ್ರಹಣೆಯ ಗುರಿ ನಿಗದಿಪಡಿಸಲಾಗಿದೆ.

ನೋಂದಣಿ ಮತ್ತು ಮುದ್ರಾಂಕ: ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು, 35 ಲಕ್ಷ ರೂ.ಗಳಿಂದ 45 ಲಕ್ಷ ರೂ.ಗಳವರೆಗಿನ ಮೌಲ್ಯದ ಅಪಾರ್ಟ್‍ಮೆಂಟ್‍ಗಳ ಮೊದಲನೇ ನೋಂದಣಿಗೆ ಮುದ್ರಾಂಕ ಶುಲ್ಕ ಶೇ.5 ರಿಂದ ಶೇ.3ಕ್ಕೆ ಇಳಿಕೆ. 2021-22ನೇ ಆರ್ಥಿಕ ವರ್ಷಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ 12,655 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

ಅಬಕಾರಿ: 2021-22ನೇ ಆರ್ಥಿಕ ವರ್ಷಕ್ಕೆ ಅಬಕಾರಿ ಇಲಾಖೆಗೆ 24,580 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

ಸಾರಿಗೆ: ಸಾರಿಗೆ ಇಲಾಖೆಗೆ 2021-22ನೇ ಸಾಲಿಗೆ 7,515 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News