ಮಾ.9ರಂದು ಮಸ್‌ದರ್ ತಹ್ಫೀಝುಲ್ ಖುರ್‌ಆನ್ ಉದ್ಘಾಟನೆ, ವಿವಿಧ ಕಟ್ಟಡಗಳಿಗೆ ಶಿಲಾನ್ಯಾಸ

Update: 2021-03-08 13:25 GMT

ಕೊಪ್ಪಳ, ಮಾ.8: ಮಸ್‌ದರ್ ಎಜ್ಯು ಆಂಡ್ ಚಾರಿಟಿ ಇದರ ತಹ್ಫೀಝುಲ್ ಖುರ್‌ಆನ್ ಕಾಲೇಜು ಉದ್ಘಾಟನೆ ಹಾಗೂ ವಿವಿಧ ಕಟ್ಟಡಗಳ ಶಿಲಾನ್ಯಾಸ ಕಾರ್ಯಕ್ರಮ ಮಾ.9ರಂದು ಸಂಜೆ 4 ಗಂಟೆಗೆ ಕೊಪ್ಪಳ ಪಟ್ಟಣದಲ್ಲಿ ನಡೆಯಲಿದೆ. 

ಉತ್ತರ ಕರ್ನಾಟಕದ ಶೈಕ್ಷಣಿಕ ಜಾಗೃತಿಗಾಗಿ ಸ್ಥಾಪಿಸಲ್ಪಟ್ಟ ಮಸ್‌ದರ್ ಎಜ್ಯು ಆಂಡ್ ಚಾರಿಟಿ ವಿವಿಧ ಕಟ್ಟಡಗಳ ಶಿಲಾನ್ಯಾಸಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಅಸ್ಸಯ್ಯಿದ್ ಖುರ್ರತುಸ್ಸಾದಾತ್ ಫಝಲ್ ಮದನಿ ಅಲ್ ಬುಖಾರಿ ನೇತೃತ್ವ ನೀಡಲಿದ್ದಾರೆ.

ರಾತ್ರಿ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ಉಲಮಾ ಒಕ್ಕೂಟದ ಕಾರ್ಯದರ್ಶಿ ಮೌಲಾನಾ ಎಸ್.ಪಿ ಹಂಝ ಸಖಾಫಿ ಬಂಟ್ವಾಳ, ಸುನ್ನಿ ಯುವಜನ ಸಂಘದ ರಾಜ್ಯ ನಾಯಕ ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಕರ್ನಾಟಕ ಸಖಾಫಿ ಕೌನ್ಸಿಲ್ ಅಧ್ಯಕ್ಷ ಪಿಪಿ ಅಹ್ಮದ್ ಸಖಾಫಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ಮೌಲಾನಾ ಅಬೂ ಸುಫ್ಯಾನ್ ಮದನಿ, ವಾರದ ಗೌಸ್ ಮೊಹಿದ್ದೀನ್ ಹೂವಿನ ಹಡಗಲಿ, ಅಪ್ಸರ್ ಹುಸೈನ್ ಅತ್ತಾರಿ, ಹಾಜಿ ಸಾದಿಕ್ ಅತ್ತಾರಿ ಕೊಪ್ಪಳ, ಗೋಲ್ಡನ್ ಅಬ್ದುಲ್ ಲತೀಫ್ ಹಾಜಿ, ಕಾಟನ್ ಪಾಷಾ ಕೊಪ್ಪಳ, ಅಮ್ಜದ್ ಪಟೇಲ್ ಕೊಪ್ಪಳ, ಕೆ.ಎಂ ಸಯ್ಯದ್ ಕೊಪ್ಪಳ, ಮೆಹಬೂಬ್ ಸಿದ್ದಾಪುರ, ಮಾನ್ವಿ ಪಾಷಾ, ಹುಸೈನ್ ಪೀರಾ ಮುಜವಾರ್, ಕಲೀಂ ಬಳ್ಳಾರಿ, ಸಲೀಂ ಅಲ್ವಿ ಕೊಪ್ಪಳ, ಖಾಝಿ ಗುಲಾಂ ಹುಸೈನ್ ನೂರಿ ಬೂದುಗುಂಪ, ಮೌಲಾನಾ ನಝೀರ್ ಅಹ್ಮದ್ ನರ್ಸಾಪುರ, ನೂರುದ್ದೀನ್ ರಝ್ವಿ ಗಂಗಾವತಿ, ಜನಾಬ್ ಇಬ್ರಾಹಿಂ ಪಟ್ಟಾಡಿ, ನಝೀರ್ ಅಹ್ಮದ್ ಮುದಗಲ್, ಚಾಂದ್ ಪಾಷಾ ಕಿಲ್ಲೇದಾರ್, ಮೆಹಬೂಬ್ ಬಸಾಪಟ್ಟಣ, ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಫಿಝ್ ಸುಫ್ಯಾನ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News