×
Ad

ವಿರಾಜಪೇಟೆಯಲ್ಲಿ ಕೇರಳ ಲಾಟರಿ ಮಾರಾಟ: ವಾಹನ ಸಹಿತ ಓರ್ವನ ಬಂಧನ

Update: 2021-03-11 23:24 IST
ಸಾಂದರ್ಭಿಕ ಚಿತ್ರ

ಮಡಿಕೇರಿ, ಮಾ.11: ಕರ್ನಾಟಕ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧವಿದ್ದರೂ ಕೇರಳ ರಾಜ್ಯದಿಂದ ಟಿಕೆಟ್ ಗಳನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ವಿರಾಜಪೇಟೆ ಪೊಲೀಸರು ವಾಹನ ಸಹಿತ ಓರ್ವನನ್ನು ಬಂಧಿಸಿದ್ದಾರೆ.

ವಿರಾಜಪೇಟೆ ತಾಲೂಕಿನ ಹಳೇ ಸಿದ್ದಾಪುರದ ಸಾದಿಕ್(32) ಎಂಬಾತನೇ ಬಂಧಿತ ಆರೋಪಿಯಾಗಿದ್ದು, 23 ಸಾವಿರ ರೂ. ಮೌಲ್ಯದ ಲಾಟರಿ ಟಿಕೆಟ್ ಗಳು ಮತ್ತು ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ. 

ವಿರಾಜಪೇಟೆ ಠಾಣಾಧಿಕಾರಿ ಜಗದೀಶ್ ಧೂಳ್ ಶೆಟ್ಟಿ ಹಾಗೂ ಸಿಬ್ಬಂದಿಗಳು ನಗರದ ಹೊರವಲಯದ ಆರ್ಜಿ ಸೇತುವೆ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. 

ವಿರಾಜಪೇಟೆ ಉಪವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನಿರಿಕ್ಷಕರಾದ ಶ್ರೀಧರ್ ಅವರ ನಿರ್ದೇಶನದಲ್ಲಿ ವಿರಾಜಪೇಟೆ ನಗರ ಠಾಣೆಯ ಅಪರಾಧ ವಿಭಾಗದ ಉಪನಿರಿಕ್ಷಕ ಹೆಚ್.ಎಸ್.ಬೋಜಪ್ಪ ಸಿಬ್ಬಂದಿಗಳಾದ ಸತೀಶ್, ಮೋಹನ್, ಮಧು, ಮುಸ್ತಫಾ, ಗಿರೀಶ್, ಅವರುಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News