ಮೊದಲ ಟಿ20 ಪಂದ್ಯ: ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದ ಕೆ.ಎಲ್ ರಾಹುಲ್

Update: 2021-03-12 18:21 GMT
Photo: Twitter

ಅಹಮದಾಬಾದ್, ಮಾ.12: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದ ವೇಳೆ ಭಾರತದ ಆಟಗಾರ ಕೆ.ಎಲ್ ರಾಹುಲ್ ತನ್ನ ಅದ್ಭುತ ಫೀಲ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ಕೇವಲ 124 ರನ್ ಗಳಿಸಿತ್ತು. ಬಳಿಕ ಇಂಗ್ಲೆಂಡ್ ಬ್ಯಾಟಿಂಗ್ ವೇಳೆ ಐದನೇ ಓವರ್‌ನಲ್ಲಿ ಅಕ್ಸರ್ ಪಟೇಲ್ ಎಸೆತದಲ್ಲಿ ಜೋಸ್ ಬಟ್ಲರ್‌ ಚೆಂಡನ್ನು ಸಿಕ್ಸರ್ ನತ್ತ ಬಾರಿಸಿದರು. ಬಾಲ್ ಇನ್ನೇನು ಬೌಂಡರಿ ಲೈನ್ ದಾಟಬೇಕು ಎನ್ನುವಷ್ಟರಲ್ಲಿ ಲೈನ್ ಬಳಿ ಇದ್ದ ರಾಹುಲ್ ಹಿಂದಕ್ಕೆ ಹಾರಿ, ಚೆಂಡನ್ನು ಹಿಡಿದು ಮೈದಾನಕ್ಕೆ ಎಸೆದಿದ್ದಾರೆ. ರಾಹುಲ್ ಅವರ ಈ ಅದ್ಭುತ ಫೀಲ್ಡಿಂಗ್ ನಿಂದಾಗಿ ಭಾರತ ತಂಡಕ್ಕೆ ನಾಲ್ಕು ರನ್ ಉಳಿತಾಯವಾಯಿತು.

ರಾಹುಲ್ ಅವರ ಈ ಅದ್ಭುತ ಫೀಲ್ಡಿಂಗ್ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. 

ಇದಕ್ಕೂ ಮೊದಲು ಇಂಗ್ಲೆಂಡ್ ನ ಶಿಸ್ತುಬದ್ಧ ಬೌಲಿಂಗ್ ದಾಳಿಯಿಂದಾಗಿ ಭಾರತ ಕೇವಲ 20 ಓವರ್‌ಗಳಲ್ಲಿ 124/7ರನ್ ಗಳಿಸಿತ್ತು. ಶ್ರೇಯಸ್ ಅಯ್ಯರ್ (48 ಎಸೆತಗಳಲ್ಲಿ 67) ಮಾತ್ರ ಪ್ರತಿರೋಧ ತೋರಿದರು.

ನಾಯಕ ವಿರಾಟ್ ಕೊಹ್ಲಿ ಶೂನ್ಯ ಸಂಪಾದಿಸಿದರೆ, ರಾಹುಲ್ ಮತ್ತು ಶಿಖರ್ ಧವನ್ ಕ್ರಮವಾಗಿ 1 ಮತ್ತು 4 ರನ್ ಗಳಿಸಿದರು. ಫಾರ್ಮ್‌ನಲ್ಲಿರುವ ರಿಷಭ್ ಪಂತ್ 23 ಎಸೆತಗಳಲ್ಲಿ 21 ಮತ್ತು ಹಾರ್ದಿಕ್ ಪಾಂಡ್ಯ 21 ರನ್‌ಗಳಲ್ಲಿ 19 ರನ್ ಗಳಿಸಿ ಭಾರತ 120 ರನ್‌ಗಳ ಗಡಿ ದಾಟಲು ನೆರವಾದರು. 

ಭಾರತ ನೀಡಿದ 125 ರನ್ ಗಳ ಗುರಿಯನ್ನು ಇಂಗ್ಲೆಂಡ್ ತಂಡ ಸುಲಭವಾಗಿ ಬೆನ್ನಟ್ಟಿ ಗೆಲುವು ಸಾಧಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News