ಎಎಂಎಂಕೆಯೊಂದಿಗೆ ತಮಿಳುನಾಡು ಎಸ್‍ಡಿಪಿಐ ಮೈತ್ರಿ: 6 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟ

Update: 2021-03-13 14:49 GMT

ಹೊಸದಿಲ್ಲಿ, ಮಾ.13: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‍ಡಿಪಿಐ), ಅಮ್ಮ ಮಕ್ಕಳ್ ಮುನ್ನೇತ್ರ ಕಝಗಂ(ಎಎಂಎಂಕೆ) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅಲಂದೂರು, ಆಂಬೂರು, ಪಲಯಂಕೊಟ್ಟಯಿ, ತಿರುವರೂರು, ಮಧುರೈ ಸೆಂಟ್ರಲ್ ಮತ್ತು ತಿರುಚಿ ವೆಸ್ಟ್ ಸೇರಿ ಒಟ್ಟು 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಚೆನ್ನೈನ ಎಸ್ಡಿಪಿಐ ರಾಜ್ಯ ಪ್ರಧಾನ ಕಚೇರಿಯಲ್ಲಿ ಮಾ.12ರಂದು ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ, ಪ್ರಕಟಿಸಲಾಯಿತು. ಪಕ್ಷದ ರಾಜ್ಯಾಧ್ಯಕ್ಷ ನೆಲ್ಲಯಿ ಮುಬಾರಕ್ ಅಧ್ಯಕ್ಷತೆ ವಹಿಸಿದ್ದರು. ಎಸ್‍ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಕೆಕೆಎಸ್ ಎಂ ದೆಹ್ಲನ್ ಬಾಖವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ವಿಶೇಷ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ರಾಜ್ಯ ಉಪಾಧ್ಯಕ್ಷ ಅಮ್ಜದ್ ಪಾಶ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಝಾಮ್ ಮುಹಿಯುದ್ದೀನ್, ಅಬ್ದುಲ್ ಹಮೀದ್, ಎ.ಎಸ್.ಉಮರ್ ಫಾರೂಕ್, ರಾಜ್ಯ ಕೋಶಾಧಿಕಾರಿ ವಿ.ಎಂ.ಅಬೂ ತಾಹಿರ್, ರಾಜ್ಯ ಕಾರ್ಯದರ್ಶಿಗಳಾದ ಅಮೀರ್ ಹಂಝ, ರಥಿನಾಮ್, ಅಹ್ಮದ್ ನವವಿ, ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಎ.ಕೆ.ಕರೀಂ, ಅಡ್ವಕೇಟ್ ರಾಜಾ ಮುಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ ಮಜೀದ್ ಆರು ಮಂದಿ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.

ಅಭ್ಯರ್ಥಿಗಳು: ಪಲಯಂಕೊಟ್ಟಯಿ-ವಿಎಂಎಸ್ ಮುಹಮ್ಮದ್ ಮುಬಾರಕ್ ಅಲಿಯಾಸ್ ನೆಲ್ಲಯಿ ಮುಬಾರಕ್, ಆಂಬೂರು- ಎ.ಎಸ್.ಉಮರ್ ಫಾರೂಕ್, ಅಲಂದುರೈ- ಎಂ.ಮುಹಮ್ಮದ್ ತಮೀಮ್ ಅನ್ಸಾರಿ, ಮಧುರೈ ಸೆಂಟ್ರಲ್–ಎಸ್.ಸಿಕಂದರ್ ಬಾಷ, ತಿರುವರೂರು- ಎಂ.ಎ.ನಸೀಮಾ ಬಾನು ಹಾಗೂ ತಿರುಚಿ ವೆಸ್ಟ್- ಆರ್. ಅಬ್ದುಲ್ಲಾ ಹಸನ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News