ದ್ವಿತೀಯ ಪಿಯು ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ: ಮೇ 24ರಿಂದ ಪರೀಕ್ಷೆ ಆರಂಭ

Update: 2021-03-13 17:11 GMT

ಬೆಂಗಳೂರು, ಮಾ.13: 2020-21ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟಗೊಂಡಿದ್ದು, ಮೇ 24ರಿಂದ ಜೂ.16ರವರೆಗೆ ಬೆಳಗ್ಗೆ 10.30ರಿಂದ 1.30ರವರೆಗೆ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.

ಪರೀಕ್ಷಾ ವೇಳಾಪಟ್ಟಿ: ಮೇ 24-ಇತಿಹಾಸ, ಮೇ 25-ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮೇ 26-ಭೂಗೋಳಶಾಸ್ತ್ರ, ಮೇ 27-ಮನಃಶಾಸ್ತ್ರ, ಬೇಸಿಕ್ ಮ್ಯಾಥ್ಸ್, ಮೇ 28-ತರ್ಕಶಾಸ್ತ್ರ, ಮೇ 29-ಕನ್ನಡ, ಮೇ 31-ಲೆಕ್ಕಶಾಸ್ತ್ರ, ಗಣಿತ, ಶಿಕ್ಷಣ, ಜೂ.1-ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್‍ನೆಸ್, ಜೂ.2-ರಾಜ್ಯಶಾಸ್ತ್ರ, ಗಣಕ ವಿಜ್ಞಾನ, ಜೂ.3-ಜೀವಶಾಸ್ತ್ರ, ಎಲೆಕ್ಟ್ರಾನಿಕ್ಸ್, ಜೂ.4-ಅರ್ಥಶಾಸ್ತ್ರ, ಜೂ.5-ಗೃಹವಿಜ್ಞಾನ, ಜೂ.7-ವ್ಯವಹಾರ ಅಧ್ಯಯನ, ಭೌತಶಾಸ್ತ್ರ, ಜೂ.8-ಭೂಗರ್ಭ ಶಾಸ್ತ್ರ, ಜೂ.9-ತಮಿಳು, ತೆಲುಗು, ಮಲಯಾಳಂ, ಮರಾಠಿ, ಅರೇಬಿಕ್, ಫ್ರೆಂಚ್, ಜೂ.10-ಸಮಾಜಶಾಸ್ತ್ರ, ರಸಾಯನ ಶಾಸ್ತ್ರ, ಜೂ.11-ಉರ್ದು, ಸಂಸ್ಕೃತ, ಜೂ.12-ಸಂಖ್ಯಾಶಾಸ್ತ್ರ, ಜೂ.14-ಐಚ್ಛಿಕ ಕನ್ನಡ, ಜೂ.15-ಹಿಂದಿ, ಜೂ.16-ಇಂಗ್ಲೀಷ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News