×
Ad

ಕಾಮಿಡಿ ಕಿಂಗ್ ನಳಿನ್ ಕುಮಾರ್ ಗೆ ಬೆನ್ನುಮೂಳೆ ಇಲ್ಲ ಎಂಬುದನ್ನು ಬಿಜೆಪಿ ಅರ್ಥೈಸಿಕೊಂಡಂತಿದೆ: ಕಾಂಗ್ರೆಸ್

Update: 2021-03-14 00:06 IST

ಬೆಂಗಳೂರು, ಮಾ.13: ರಾಜ್ಯ ಬಿಜೆಪಿ ಆಳ್ವಿಕೆಯ ಹಿಂದಿನ ಅವಧಿಯಲ್ಲಿ ‘ರಿಪಬ್ಲಿಕ್ ಆಫ್ ಬಳ್ಳಾರಿ’ ಚಾಲ್ತಿಗೆ ಬಂದಿತ್ತು. ಈ ಬಾರಿ ಶಿವಮೊಗ್ಗ ಜಿಲ್ಲೆ ‘ರಿಪಬ್ಲಿಕ್ ಆಫ್ ಯಡಿಯೂರಪ್ಪ ಅಂಡ್ ಸನ್ಸ್’ ಆಗಿದೆ. ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ರಕ್ಷಣೆಯಲ್ಲಿ ಜಿಲ್ಲೆಯಾದ್ಯಂತ ಬಿಜೆಪಿಗರ ಗೂಂಡಾಗಿರಿ ಹದ್ದು ಮೀರಿದೆ, ಅಕ್ರಮ ದಂಧೆಗಳು ಮಿತಿ ಮೀರಿವೆ ಎಂದು ಕಾಂಗ್ರೆಸ್ ಟೀಕಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಕಾಮಿಡಿ ಕಿಂಗ್ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆನ್ನುಮೂಳೆ ಇಲ್ಲ ಎನ್ನುವುದನ್ನ ಬಿಜೆಪಿ ಅರ್ಥೈಸಿಕೊಂಡಂತಿದೆ. ಬಿಎಸ್‍ವೈ ಮುಕ್ತ ಬಿಜೆಪಿ ಮಾಡುವ ಸಲುವಾಗಿ ಬಿ.ಎಲ್.ಸಂತೋಷ್ ನೇಮಿಸಿಕೊಂಡ ಕೀಲಿಗೊಂಬೆ ಕಟೀಲ್. ತಮ್ಮ ದುರಾಡಳಿತದಿಂದ ಮುಂದೆ ಸೋಲು ಖಚಿತ ಎಂದು ಮನಗಂಡಿರುವ ಬಿಜೆಪಿ ಏನೇನೋ ಸರ್ಕಸ್ ನಡೆಸುತ್ತಿದೆ ಎಂದು ಕಾಂಗ್ರೆಸ್ ಟ್ವೀಟರ್ ನಲ್ಲಿ ಟೀಕಿಸಿದೆ.

‘ಮೋದಿನೊಮಿಕ್’ ಚಮತ್ಕಾರಗಳಿಂದ ದೇಶದ ಆರ್ಥಿಕತೆ ಚಿಂತಾಜನಕ ಸ್ಥಿತಿಗೆ ತಲುಪಿದೆ. ದೇಶದ ಮೇಲೆ ನರೇಂದ್ರ ಮೋದಿ ಅವರ ಭೀಕರ ಹಲ್ಲೆಗಳು ಒಂದೆರೆಡಲ್ಲ. ನೋಟ್ ಬ್ಯಾನ್, ಜಿಎಸ್‍ಟಿಯಿಂದ ಹಿಡಿದು ಲಾಕ್‍ಡೌನ್, ಬೆಲೆ ಏರಿಕೆವರೆಗೂ ನಿರಂತರ ಹಲ್ಲೆ ನಡೆಸಿದ ಪರಿಣಾಮ ಉತ್ಪಾದನೆ ಕುಸಿದಿವೆ. ಕೇವಲ ಹೆಡ್‍ಲೈನ್ ಮ್ಯಾನೇಜ್ಮೆಂಟ್‍ನಿಂದ ದೇಶ ಉಳಿಸಲಾಗದು ಎಂದು ಕಾಂಗ್ರೆಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News