×
Ad

ಅಶ್ಲೀಲ ಸಿಡಿ ಪ್ರಕರಣ: ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಿ: ಡಿಕೆಶಿ ಒತ್ತಾಯ

Update: 2021-03-14 13:34 IST

ಶಿವಮೊಗ್ಗ, ಮಾ.14: ರಮೇಶ್ ಜಾರಕಿಹೊಳಿ ಜೊತೆಯಲ್ಲಿ ಸಿಡಿಯಲ್ಲಿ ಕಾಣಿಸಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿರುವ ಯುವತಿ ಬಿಡುಗಡೆ ಮಾಡಿರುವ ವೀಡಿಯೋವನ್ನು ನಾನು ನೋಡಿಲ್ಲ. ಆ ಬಗ್ಗೆ ಚರ್ಚೆ ನಡೆಸಿದ ಬಳಿಕ ಮಾತನಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ಬಿಡುಗಡೆ ಮಾಡಿರುವ ವೀಡಿಯೋ ಕುರಿತು ಪತ್ರಿಕೆಗಳಲ್ಲಿ ಓದಿದ್ದೇನೆ. ಪೊಲೀಸರು, ಮಹಿಳಾ ಆಯೋಗದವರು ಈ ಬಗ್ಗೆ ತನಿಖೆ ನಡೆಸಬೇಕು ಎಂದರು. 

ಸಿಡಿ ವಿಚಾರವಾಗಿ ಬಿಜೆಪಿಯ ಹಲವರು ಮಾತನಾಡಿದ್ದಾರೆ. ಯತ್ನಾಳ್, ವಿಶ್ವನಾಥ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಅವೆಲ್ಲವನ್ನು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು, ತನಿಖೆ ನಡೆಸಬಹುದಿತ್ತು. ಆದರೆ ಈಗ ನಡೆಯುತ್ತಿರುವ ತನಿಖೆ ತನಿಖೆಯಾಗಿಲ್ಲ. ಒಂದು ವೇಳೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಲು ಆಗುವುದಿಲ್ಲ ಎಂದರೆ, ನಾವೇ ದೂರು ಕೊಡಿಸುತ್ತೇವೆ. ಅದು ಯಾವ ಸಿಡಿ ನೋಡೋಣ. ಮಂತ್ರಿ ಕೂಡ ಅಧಿಕೃತವಾಗಿ ಸಿಡಿ ವಿಚಾರ ಹೇಳಿದ್ದಾರೆ. ಅದರ ತನಿಖೆ ಯಾಕಾಗುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. 

ಷಡ್ಯಂತ್ರಗಳು ನಡೆಯುತ್ತಿವೆ, ಮುಂದುವರಿಯಲಿ

ನಮ್ಮ ಮೇಲೆ ಹಿಂದಿನಿಂದ ಷಡ್ಯಂತ್ರಗಳು ನಡೆದುಕೊಂಡು ಬಂದಿದೆ. ಅದು ಮುಂದುವರೆಯುತ್ತಿದೆ. ಮುಂದುವರಿಯಲಿ. ಇನ್ನು, ರಮೇಶ್ ಜಾರಕಿಹೊಳಿ ‘ಸಿಡಿಯಲ್ಲಿ ಇರುವುದು ನಾನಲ್ಲ’ ಎಂದು ಒಮ್ಮೆ ಹೇಳಿದರು. ‘ನಂಗೆ ಗೊತ್ತೇ ಇಲ್ಲ’ ಎಂದಿದ್ದರು. ಈಗ ಅವರೇ ಎಲ್ಲವನ್ನು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News