ಕೋರೋನ ವಿರುದ್ಧ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ, ನಿರ್ಲಕ್ಷ್ಯ ಬೇಡ: ಸಿಎಂ ಯಡಿಯೂರಪ್ಪ
Update: 2021-03-14 21:36 IST
ಬೆಂಗಳೂರು, ಮಾ. 14: ‘ಕೋರೋನ ವಿರುದ್ಧ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ. ಲಸಿಕೆ ತೆಗೆದುಕೊಳ್ಳಲು ಅರ್ಹರಾದ ಎಲ್ಲರೂ ತಪ್ಪದೆ ಲಸಿಕೆ ಪಡೆದುಕೊಳ್ಳಿ. ಸ್ವದೇಶಿ ಲಸಿಕೆ ಸಂಪೂರ್ಣ ಸುರಕ್ಷಿತವಾಗಿದೆ. ಕಿಂಚಿತ್ತೂ ನಿರ್ಲಕ್ಷ್ಯ ವಹಿಸದೆ ಎಲ್ಲ ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸೋಣ, ಒಗ್ಗಟ್ಟಿನಿಂದ ನಾವೆಲ್ಲರೂ ಕರ್ನಾಟಕವನ್ನು ಕೊರೋನಾ ಮುಕ್ತಗೊಳಿಸೋಣ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಸಲಹೆ ಮಾಡಿದ್ದಾರೆ.
ರವಿವಾರ ಟ್ವಿಟ್ ಮಾಡಿರುವ ಅವರು,‘ನಾವು ಈಗ ಮೈಮರೆತರೇ ಇಷ್ಟು ದಿನದ ಪ್ರಯತ್ನಗಳಿಗೆ ಅರ್ಥವಿಲ್ಲದಂತಾಗುತ್ತದೆ. ಈಗಲೂ ನಿರ್ಲಕ್ಷ್ಯ ವಹಿಸದೆ ಮಾಸ್ಕ್, ಸುರಕ್ಷಿತ ಅಂತರ ಪಾಲಿಸುವುದು ನಮ್ಮ ಅಗತ್ಯ ಕರ್ತವ್ಯ. ಎಲ್ಲ ಸುರಕ್ಷಿತ ಮಾರ್ಗಸೂಚಿಗಳನ್ನು ಪಾಲಿಸಿ, ಒಗ್ಗಟ್ಟಿನಿಂದ ಸೋಂಕಿನ ವಿರುದ್ಧ ಶ್ರಮಿಸೋಣ' ಎಂದು ಅವರು ಕರೆ ನೀಡಿದ್ದಾರೆ.