ಧರ್ಮ ಗ್ರಂಥಗಳ ಅವಹೇಳನ ಮಾಡುವವರ ವಿರುದ್ಧ ಕಠಿಣ ಕ್ರಮ ಅಗತ್ಯ: ಎಸ್ಸೆಸ್ಸೆಫ್

Update: 2021-03-15 13:33 GMT

ಬೆಂಗಳೂರು, ಮಾ.15: ಕುರ್‌ಆನ್ ಮನುಕುಲದ ಮಾರ್ಗದರ್ಶಿ. ಕುರ್‌ಆನ್ ಪ್ರತಿಯೊಂದು ಪದಗಳೂ ಮನುಷ್ಯ ಬದುಕಿಗೆ ಇರುವ ದಿಕ್ಸೂಚಿಯಾಗಿರುತ್ತವೆ. ಅಲ್ಲಾಹನ ವಚನವಾಗಿರುವ ಕುರ್‌ಆನ್ ನಲ್ಲಿ ಇವತ್ತಿನವರೆಗೂ ಯಾವುದೇ ತಿದ್ದುಪಡಿ ಆಗಿಲ್ಲ, ಆಗಲು ಸಾಧ್ಯವೂ ಇಲ್ಲ. ಅದರ ಅಗತ್ಯವೂ ಇಲ್ಲ ಎಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ತಿಳಿಸಿದ್ದಾರೆ.

ಪವಿತ್ರ ಕುರ್‌ಆನ್ ನಲ್ಲಿ ತಿದ್ದುಪಡಿ ಮಾಡಬೇಕೆನ್ನುವ ಹೇಳಿಕೆ ಅಜ್ಞಾನದ ಪರಾಕಾಷ್ಠೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡವಲು ಇರುವ ಯತ್ನ ಮಾತ್ರ. ಧರ್ಮ ಗ್ರಂಥಗಳನ್ನು ಅವಹೇಳನ ಮಾಡಿ ಕೋಮುವಾದಕ್ಕೆ ಪ್ರಚೋದನೆ ಮಾಡುವ ಹೇಳಿಕೆ ಕೊಡುವವರನ್ನು ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News