ಡೆಲಿವರಿ ಬಾಯ್‍ನಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಯುವತಿ ವಿರುದ್ಧ ಮೊಕದ್ದಮೆ ದಾಖಲು
Update: 2021-03-15 23:01 IST
ಬೆಂಗಳೂರು, ಮಾ.15: ಝೊಮಾಟೋ ಡೆಲಿವರಿ ಬಾಯ್‍ನಿಂದ ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದ ಯುವತಿಯ ಮೇಲೆ ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಸೋಮವಾರ ಕನ್ನಡ ಪರ ಹೋರಾಟಗಾರ ರೂಪೇಶ್, ದೂರುದಾರ ಕಾಮರಾಜ್ ನೀಡಿದ ಅರ್ಜಿ ಅನ್ವಯ ಯುವತಿ ಹಿತೇಶಾ ಚಂದ್ರನೀ ವಿರುದ್ಧ ಮೊಕದ್ದಮೆ ದಾಖಲಾಗಿದ್ದು, ಹಲ್ಲೆ ಮತ್ತು ನಿಂದನೆ ಆರೋಪ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ಈ ವೇಳೆ ಪ್ರತಿಕ್ರಿಯಿಸಿರುವ ದೂರುದಾರರು, ನೌಕರ ಕಾಮರಾಜ್ ವಿಚಾರವಾಗಿ ಆತನ ಮೇಲೆ ಚಪ್ಪಲಿಯಿಂದ ಹಲ್ಲೆ ಹಾಗೂ ಸುಳ್ಳು ಆರೋಪ ಮಾಡಿ ನಿಂದಿಸಿ ಅವರ ವಿರುದ್ಧವೇ ಸುಳ್ಳು ಮಾಹಿತಿ ನೀಡಿರುವ ಹಿತೇಶಾ ಚಂದ್ರನೀ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಕೋರಿದರು.